| ಉಡುಪಿ(ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲೆಯ ಪ್ರಸಿದ್ದ ಕಾಪು ಶ್ರೀ ಅಮ್ಮನ ದೇವಾಲಯದ ಸಮಗ್ರ ಜೀರ್ಣೋದ್ಧಾರ ಆರಂಭಗೊಂಡಿದೆ. ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಮತ್ತು ಭಕ್ತಾದಿಗಳ ಸಹಕಾರದೊಂದಿಗೆ ಜೀರ್ಣೋದ್ಧಾರಗೊಳ್ಳಲಿರುವ ದೇವಾಲಯ ಸಂಪೂರ್ಣ ಶಿಲಾಮಯವಾಗಿರಲಿದೆ.
ಅಲ್ಲದೆ ಬಾಗಲಕೋಟೆ ಜಿಲ್ಲೆಯ ಇಲ್ ಕಲ್ ನ ಕೆಂಪು ಶಿಲೆ ಕಲ್ಲನ್ನು ಉಪಯೋಗಿಸಿಕೊಂಡು ಈ ದೇವಾಲಯ ಜೀರ್ಣೋದ್ಧಾರಗೊಳ್ಳುತ್ತಿದ್ದು, ನವಶಕ್ತಿ ನವದುರ್ಗೆಯರ 9 ಸೋಪಾನಗಳು, 9 ಮೆಟ್ಟಿಲುಗಳು, ಒಂಬತ್ತು ಗೋಪುರಗಳು ಇರುವಂತೆ ನಿರ್ಮಾಣ ಮಾಡಲಾಗುತ್ತದೆ. ಶಿಲಾಮಯ ಗೊಳ್ಳುವ ದೇವಾಲಯದ ಗೋಡೆಯಲ್ಲಿ ಭಕ್ತರು ನೀಡಿದ ಶಿಲೆ ಕಲ್ಲು ಇರಬೇಕೆಂಬುದು ತಾಯಿಯ ಮಹಾದಾಸೆಯಾಗಿದ್ದು ಅದರಂತೆ ಪ್ರತಿ ಭಕ್ತರು ಅಮ್ಮನಿಗಾಗಿ ತಮ್ಮ ಭಕ್ತಿ ಪೂರ್ವಕ ಸೇವೆಯನ್ನು ಸಲ್ಲಿಸಬಹುದಾಗಿದೆ. ಶಿಲಾ ಸೇವೆಯ ಸಮರ್ಪನಾ ಸಮಾರಂಭವು ಮಾ.23 ಮತ್ತು 24 ರಂದು ನಡೆಯಲಿದೆ. ಇದೀಗ ಭಕ್ತರು ಈ ಅವಕಾಶವನ್ನು ಉಪಯೋಗಿಸಿಕೊಂಡು ಅಮ್ಮನ ಕೃಪೆಗೆ ಪಾತ್ರರಾಗಬೇಕೆಂದು ಅಭಿವೃದ್ಧಿ ಸಮಿತಿ ವಿನಂತಿಸಿಕೊಂಡಿದೆ. ಎರಡು ದಿನಗಳ ಕಾಲ ನಿರಂತರವಾಗಿ ನಡೆಯುವ ಶೀಲಾ ಸೇವೆಯ ವಿವರ ಈ ಹೀಗಿದೆ:- 1 ಶಿಲೆ 999/- 9 ಶಿಲೆ 9999/- 99 ಶಿಲೆ 99999/-
| |