8ನೇ ತರಗತಿ ವಿದ್ಯಾರ್ಥಿಯೊಂದಿಗೆ ಮೂರು ಮಕ್ಕಳ ತಾಯಿ ಪರಾರಿ
ಉತ್ತರ ಪ್ರದೇಶ: ಉತ್ತರ ಪ್ರದೇಶದ ಕ್ಯಾಂಪಿಯರ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8ನೇ ತರಗತಿ ವಿದ್ಯಾರ್ಥಿಯೊಂದಿಗೆ ಮೂರು ಮಕ್ಕಳ ತಾಯಿ ಪರಾರಿಯಾಗಿರುವ ಘಟನೆ ನಡೆದಿದೆ. 29 ವರ್ಷದ ಮಹಿಳೆ ಹಾಗೂ 15 ವರ್ಷದ ಬಾಲಕ ಕಳೆದ ಒಂದು ವರ್ಷದಿಂದ ಒಟ್ಟಿಗೆ ಇದ್ದರು. ವಯಸ್ಸಿನ ನಡುವಿನ ಅಂತರದ ಕಾರಣ ಇವರ ಬಗ್ಗೆ ಕುಟುಂಬದ ಪೋಷಕರಿಗೆ ಯಾವುದೇ ಸಂಶಯವನ್ನು ವ್ಯಕ್ತವಾಗಿರಲಿಲ್ಲ. ಹೀಗಿದ್ದೂ ಮಹಿಳೆ ಮತ್ತು ಬಾಲಕ ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.
ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ಕುಟುಂಬಸ್ಥರು ಕ್ಯಾಂಪಿಯರ್ ಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆ ಮತ್ತು ಬಾಲಕನ ಪತ್ತೆಯಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.