ಟೋಕಿಯೋ ಒಲಿಂಪಿಕ್ಸ್: ಮೊದಲ ಬಾರಿಗೆ ಭಾರತದ ಮಹಿಳೆಯ ಸ್ಪರ್ಧೆ
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಭಾರತದ ಮಹಿಳೆಯೊಬ್ಬರು ಭಾಗವಹಿಸುತ್ತಿದ್ದಾರೆ. ತಮಿಳುನಾಡಿನ ಸಿ.ಎ. ಭವಾನಿ ದೇವಿ ಅವರು ಟೋಕಿಯೋ ಒಲಂಪಿಕ್ಸ್ನಲ್ಲಿ ಭಾಗವಹಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಈ ಮೂಲಕ ಅಧಿಕೃತ ಶ್ರೇಯಾಂಕ ವಿಧಾನದ ಮೂಲಕ ಟೋಕಿಯೋ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬುಡಾಪೆಸ್ಟ್ ನಲ್ಲಿ ನಡೆದ ಪುರುಷರ ಮತ್ತು ಮಹಿಳೆಯರ ಸೇಬರ್ ವಿಶ್ವಕಪ್ ನಲ್ಲಿ ಅಧಿಕೃತ ಶ್ರೇಯಾಂಕದ ಆಧಾರದ ಮೇಲೆ, ಭವಾನಿದೇವಿ ಅವರು ಮಹಿಳೆಯರ ವೈಯಕ್ತಿಕ ಸೇಬರ್ನಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದು ಕೊಂಡಿದ್ದಾರೆ. ಅಲ್ಲದೆ ಒಲಿಂಪಿಕ್ಸ್ ಕೂಟಕ್ಕೆ ಆಯ್ಕೆಯಾದ ಭಾರತದ ಮೊದಲ ಫೆನ್ಸರ್ ಎನಿಸಿಕೊಂಡಿದ್ದಾರೆ.