ಉಪ್ಪಿನಂಗಡಿ : ಡೀಸೆಲ್ ತುಂಬಿದ್ದ ಟ್ಯಾಂಕರೊಂದು ಪಲ್ಟಿಯಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಕ್ಕಿಲಾಡಿ ಬೊಳ್ಳಾರು ಎಂಬಲ್ಲಿ ಇಂದು ನಡೆದಿದೆ.
ಘಟನೆಯಲ್ಲಿ ಟ್ಯಾಂಕರ್ ಚಾಲಕ ಗಾಯಗೊಂಡಿದ್ದಾರೆ. ಮಂಗಳೂರಿನಿಂದ ಹೋಗುತ್ತಿದ್ದ ಟ್ಯಾಂಕರ್ ಬೊಳ್ಳಾರು ಬಳಿ ಬರುತ್ತಿದಂತೆ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದೆ. ಪರಿಣಾಮ ಸೋರಿಕೆಯಾದ ಡೀಸೆಲ್ನ್ನು ತುಂಬಿಕೊಳ್ಳಲು ಸ್ಥಳೀಯರು, ರಿಕ್ಷಾ ಚಾಲಕರು, ವಾಹನ ಸವಾರರು ಸ್ಥಳದಲ್ಲಿ ಜಮಾಸಿದ್ದರು. ಘಟನೆಯಿಂದ ಕೆಲಕಾಲ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು.
ಈ ವೇಳೆ ಸ್ಥಳಕ್ಕೆ ಬಂದ ಉಪ್ಪಿನಂಗಡಿ ಪೊಲೀಸರು ಅಲ್ಲಿ ಜಮಾಸಿದ್ದ ಜನರನ್ನು ಚದುರಿಸುವ ಸಲುವಾಗಿ ಲಘು ಲಾಠಿ ಪ್ರಹಾರ ನಡೆಸಿದರು ಎಂದು ತಿಳಿದು ಬಂದಿದೆ.
| | |