ಕುತ್ಪಾಡಿ ಅಭಿವೃದ್ಧಿ ಕಾರ್ಯಗಳ ನಾಮ ಫಲಕ ತೆರವು: ಸ್ಥಳೀಯರ ಆಕ್ರೋಶ
ಉಡುಪಿ: ಮಾಜಿ ಸಚಿವ ಪ್ರಮೋದ್ ಅವರ ಅಭಿವೃದ್ಧಿ ಕಾರ್ಯಗಳ ನಾಮ ಫಲಕವನ್ನು ಕಿಡಿಗೇಡಿಗಳು ತೆರವುಗೊಳಿಸಿರುವ ಘಟನೆ ಕಡೆಕಾರು ಗ್ರಾಮ ಪಂಚಾಯತ್ ಕಟ್ಟೆ ಗುಡ್ಡೆ ಕುತ್ಪಾಡಿಯಲ್ಲಿ ನಡೆದಿದೆ.
ಮೂರು ವರ್ಷಗಳ ಹಿಂದೆ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಅವರ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿ ಸುಮಾರು 56 ಲಕ್ಷ ರೂಪಾಯಿಗಳ ಕಾಮಗಾರಿಯ ಫಲಕವನ್ನು ಜನತಾ ಕಾಲೊನಿಯ ಮುಖ್ಯ ರಸ್ತೆ ಮತ್ತು ಕಟ್ಟೆ ಗುಡ್ಡೆ ಕುತ್ಪಾಡಿಯ 10 ನೇ ಅಡ್ಡ ರಸ್ತೆಯಲ್ಲಿ ನಾಮ ಫಲಕ ಅಳವಡಿಸಲಾಗಿತ್ತು. ಇದನ್ನು 1 ತಿಂಗಳ ಹಿಂದೆ ಯಾರೋ ಕಿಡಿಗೇಡಿಗಳು ತೆಗೆದಿದ್ದರು. ಈ ವೇಳೆ ಕುತ್ಪಾಡಿ ವಾರ್ಡ್ ಕಾಂಗ್ರೆಸ್ ಸಮಿತಿ ಯಿಂದ ಪಂಚಾಯತ್‍ನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮತ್ತೊಮ್ಮೆ ಫಲಕವನ್ನು ಅಳವಡಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು.
ಈ ಬಗ್ಗೆ ಪಂಚಾಯತ್ ಅಧ್ಯಕ್ಷರು, ಪಿಡಿಓಗಳು ನಿರ್ಣಯ ಪಡೆದುಕೊಂಡು ಸ್ಥಳ ಪರಿಶೀಲನೆ ನಡೆಸಿ ಮಾ.12 ರಂದು ನಾಮಫಲಕವನ್ನು ಮತ್ತೆ ಅಳವಡಿಸಲಾಗಿತ್ತು. ಆದರೆ ಈ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪಿಡಿಓಗೆ ಕರೆ ಮಾಡಿ ಈ ಫಲಕವನ್ನು ತೆರವು ಗೊಳಿಸುವಂತೆ ತಿಳಿಸಿದ್ದಾರೆ. ಅಲ್ಲದೆ ಪಂಚಾಯತ್‍ನಿಂದ ಈ ಫಲಕವನ್ನು ತೆರವು ಗೊಳಿಸದಿದ್ದರೆ ತಾವೇ ತೆಗೆಸುವುದಾಗಿ ಹೇಳಿದ್ದಾರೆ.
ಇದೀಗ ನಿನ್ನೆ ಹಗಲು ಹೊತ್ತಲ್ಲಿ ಗ್ರಾಮ ಪಂಚಾಯತ್ ನ ಅಧಿಕಾರಿಗಳೇ ಬಂದು ತಾವೇ ಖುದ್ದಾಗಿ ಹಾಕಿದ ಫಲಕ ರಾತ್ರಿಯಲ್ಲಿ ಯಾರೋ ಕಿಡಿಗೇಡಿಗಳು ಕಿತ್ತಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಪಿಡಿಓ ಅವರು ಪ್ರತಿಕ್ರಿಯೆ ನೀಡಿ, ಫಲಕವನ್ನು ಅಧಿಕೃತವಾಗಿ ಪಂಚಾಯತ್‍ನಿಂದ ಹಾಕಲಾಗಿದೆ. ಆದ್ದರಿಂದ ಈ ಬಗ್ಗೆ ಪೆÇಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.