ಉಡುಪಿ ಪೌರಕಾರ್ಮಿಕರ ಮೇಲೆ ಹಲ್ಲೆ – ನಕಲಿ ಹಿಂದು ನಾಯಕರು ಎಲ್ಲಿ?: ದೀಪಕ್ ಕೋಟ್ಯಾನ್

ಉಡುಪಿ : ಅವಿಭಜಿತ ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಾಗ, ತಾವುಗಳು ಹಿಂದೂ ಮುಖಂಡರೆಂಬಂತೆ ದೊಡ್ಡದಾಗಿ ಭಾಷಣ ಬಿಗಿದು, ಬೆಂಕಿ ಕೊಡುತ್ತೇವೆ ಎನ್ನುವ ಹೇಳಿಕೆ ನೀಡುವ ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದಾಜ್ಲೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಈಗ ಎಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಪ್ರಶ್ನಿಸಿದ್ದಾರೆ.

ಉಡುಪಿ ನಗರದದಲ್ಲಿ ನಿನ್ನೆ ಬಿಜೆಪಿ ಅಲ್ಪಸಂಖ್ಯಾತ ಅಧ್ಯಕ್ಷರ ಸಹೋದರರಿಂದ ಹಲ್ಲೆಗೊಳಗಾಗಿರುವ ಪೌರಕಾರ್ಮಿಕನ ಪರವಾಗಿ ಯಾವುದೇ ಹೇಳಿಕೆ ನೀಡದ ಸಂಸದ ಮತ್ತು ಶಾಸಕರ ವಿರುದ್ಧ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಗರಂ ಆಗಿದೆ.

ಕಾಂಗ್ರೆಸ್ ಅಥವಾ ಇತರ ಪಕ್ಷದ ಬೆಂಬಲಿತ ಮುಸ್ಲಿಂ ಆಗಿದ್ದರೆ, ಇಷ್ಟೊತ್ತಿಗೆ ಈ ನಾಯಕರು ಉಡುಪಿ ಜಿಲ್ಲೆಯಲ್ಲಿ ಕೋಮು ಸಂಘರ್ಷವಾಗುವ ಹೇಳಿಕೆ ನೀಡುತ್ತಿದ್ದರು. ಆದರೆ ಹಿಂದು ಪೌರಕಾರ್ಮಿಕನ ಮೇಲೆ ದಾಳಿ ಮಾಡಿದ್ದು ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರ ಸಹೋದರರಿಂದ. ಹಲ್ಲೆಯಾದವರು ಮತ್ತು ಹಲ್ಲೆ ಮಾಡಿದವರು ಯಾರು ಎಂಬುದನ್ನು ಹುಡುಕುವ ಬದಲು ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು. ಜಾತಿ ಜಾತಿ ನಡುವೆ ಸಂಘರ್ಷ ತರುವ ಬಿಜೆಪಿ ನಾಯಕರು ಇನ್ನಾದರೂ ಅರ್ಥಮಾಡಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ತಿಳಿಸಿದೆ.

ನಗರವನ್ನು ಸ್ವಚ್ಛವಾಗಿಡಲು ನಗರದ ಪೌರ ಕಾರ್ಮಿಕರ ಸೇವೆ ಶಾಘ್ಲನೀಯ. ಆದರೆ ಇಂತಹ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದದ್ದು ಖಂಡನೀಯ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ದೀಪಕ್ ಕೋಟ್ಯಾನ್ ಇನ್ನಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!