ಉಡುಪಿ: ಡಾ.ಟಿಎಂಎಪೈ ಆಸ್ಪತ್ರೆ ಮಹಿಳೆಯರಿಗಾಗಿ ವಿಶೇಷ ಆರೋಗ್ಯ ತಪಾಸಣೆ
ಉಡುಪಿ: ಅಂತರರಾಷ್ಟ್ರೀಯ ಮಹಿಳಾ ದಿನ 2021ರ ಅಂಗವಾಗಿ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ವಿಶೇಷ ಆರೋಗ್ಯ ತಪಾಸಣಾ ಪ್ಯಾಕೇಜ್ಗಳನ್ನು ನೀಡಲಾಗಿದೆ. ಈ ಪ್ಯಾಕೇಜ್ ಮಾ.8 ರಿಂದ ಮಾ.13 ರ ವರೆಗೆ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಶಶಿಕಿರಣ್ ಉಮಾಕಾಂತ್ ಅವರು, ಡಾ. ಟಿಎಂಎ ಪೈ ಆಸ್ಪತ್ರೆಯು ಮಹಿಳೆಯರಿಗಾಗಿ ಎರಡು ವಿಶೇಷ ಆರೋಗ್ಯ ತಪಾಸಣಾ ಪ್ಯಾಕೇಜ್ಗಳನ್ನು ಪರಿಚಯಿಸುತ್ತಿದೆ. ಅದರಂತೆ ಮಾ.8 ರಿಂದ ಮಾ.13 ರ ವರೆಗೆ ಆಸ್ಪತ್ರೆಯಲ್ಲಿ ಈ ಪ್ಯಾಕೇಜ್ ಲಭ್ಯವಿರಲಿದೆ. ಮೊದಲ ಪ್ಯಾಕೇಜ್ನಲ್ಲಿ ನಲವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ 1000 ರೂ. ವೆಚ್ಚದಲ್ಲಿ ಹಿಮೋಗ್ಲೋಬಿನ್, ಕೊಲೆಸ್ಟರಾಲ್, ಥೈರಾಯ್ಡ್ ಪ್ರೋಫೈಲ್ ಮತ್ತಿತರ ಮುಖ್ಯ ರಕ್ತ ಪರೀಕ್ಷೆಗಳು, ಹಾಗೂ ಸ್ತನ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ.
ಎರಡನೇ ಪ್ಯಾಕೇಜ್ನಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮೊದಲ ಪ್ಯಾಕೇಜ್ನಲ್ಲಿರುವ ಎಲ್ಲಾ ರೀತಿಯ ಪರೀಕ್ಷೆಗಳ ಜೊತೆಗೆ ಮೂತ್ರ ಪರೀಕ್ಷೆಗಳು, ಎಕ್ಸ-ರೇ, ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆಯನ್ನು 1500 ರೂ.ಗಳಲ್ಲಿ ಮಾಡಲಾಗುತ್ತದೆ. ಎರಡೂ ಪ್ಯಾಕೇಜ್ಗಳಲ್ಲಿ ಮೆಡಿಸಿನ್, ಸರ್ಜರಿ ಹಾಗೂ ಸ್ತ್ರೀರೋಗ ಶಾಸ್ತ್ರ ತಜ್ಞರ ಸಮಾಲೋಚನೆಗಳೂ ಒಳಗೊಂಡಿದೆ.
ಆದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಸಕ್ತ ಮಹಿಳೆಯರು 0820-2942121 ಗೆ ಕರೆ ಮಾಡಿ ಪೂರ್ವ ನೋಂದಣಿಯೊಂದಿಗೆ ಈ ಸೌಲಭ್ಯವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 0820-2526501/02 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.