ಉಡುಪಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ: 15ನೇ ಮನೆ ಹಸ್ತಾಂತರ
ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ವತಿಯಿಂದ ಸೂರಿಲ್ಲದವರಿಗೆ ಸೂರು ಒದಗಿಸುವ ಸಮಾಜ ಮುಖಿ ಕಾರ್ಯ ನಿರಂತರವಾಗಿ ನಡೆಯುತ್ತಾ ಬಂದಿದೆ. ಅದರಂತೆ ಸೂರು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯಡಿ ದಾನಿಗಳ ಸಹಾಯದಿಂದ ನಿರ್ಮಾಣಗೊಂಡ 15ನೇಯ ಮನೆ ಹಸ್ತಾಂತರಿಸಲಾಯಿತು.
ಮನೆ ಹಸ್ತಾಂತರವನ್ನು ಕಾಪು ಜಮಾಅತೆ ಇಸ್ಲಾಮಿ ಹಿಂದ್ ನ ಅಧ್ಯಕ್ಷರಾದ ಅನ್ವರ್ ಅಲಿ ಕಾಪುರವರು ಮನೆಯ ಮಾಲಿಕರಾದ ಚಂದ್ರಶೇಖರ್ ಅವರಿಗೆ ಕೀಲಿ ಕೈ ನೀಡುವ ಮೂಲಕ ನೆರೆವೇರಿಸಿದರು. ಕೆಲವು ವರ್ಷಗಳಿಂದ ಅರ್ಥಿಕ ಕೊರತೆಯಿಂದಾಗಿ ಅಪೂರ್ಣ ಸ್ಥಿತಿಯಲ್ಲಿದ್ದ ಚಂದ್ರಶೇಖರ್ ಅವರ ಮನೆಯನ್ನು ಸಂಘಟನೆಯ ವತಿಯಿಂದ ಪೂರ್ಣಗೊಳಿಸಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಚೇರ್ಕಾಡಿ ಪಂಚಾಯತ್ ಪಿ.ಡಿ.ಓ ಸುಭಾಶ್, ತೋನ್ಸೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ದಿನಕರ್ ಬೆಂಗ್ರೆ, ಜೆ.ಐ.ಎಚ್ ಹೂಡೆ ಘಟಕದ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್,ತೋನ್ಸೆ ಪಂಚಾಯತ್ ಉಪಾಧ್ಯಕ್ಷರಾದ ನಿತ್ಯನಂದ ಕೆಮ್ಮಣ್ಣು,ತೋನ್ಸೆ ಪಂಚಾಯತ್ ಸದಸ್ಯರಾದ ಇದ್ರಿಸ್ ಹೂಡೆ, ವಿಜಯ, ಪ್ರತಿಭಾ, ಜಮೀಲಾ ಸದೀದಾ, ಮಹೇಶ್ ಪೂಜಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.