ಶ್ರೀವಾಸುಕಿ ನಾಗಯಕ್ಷಿ ಸನ್ನಿಧಾನ, ಪರಿವರ್ತನಾ ಫೌಂಡೇಶನ್: ಮಹಾಶಿವರಾತ್ರಿ ಸಂಭ್ರಮ

ಮಣಿಪಾಲ: ಮಹಾ ಶಿವರಾತ್ರಿ ಪ್ರಯುಕ್ತ ಅಲೆವೂರು ರಸ್ತೆಯ ಮಂಚಿಕೆರೆ ಶ್ರೀವಾಸುಕಿ ನಾಗಯಕ್ಷಿ ಸನ್ನಿಧಾನ ಟ್ರಸ್ಟ್ , ಪರಿವರ್ತನಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಇಂದು (ಮಾ.11) ಸಂಜೆ 6 ರಿಂದ ಮಹಾಶಿವರಾತ್ರಿ ಸಂಭ್ರಮ ನಡೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪರಿವರ್ತನಾ ಫೌಂಡೇಶನ್ ಅಧ್ಯಕ್ಷ ಮೋಹನ್ ಭಟ್ ಅವರು,  ಈ ಸಭಾ ಕಾರ್ಯಕ್ರಮಗಳು ಸಂಜೆ 6 ರಿಂದ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶವಿಟ್ಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವೇ.ಮೂ. ಮೋಹನ ತಂತ್ರಿ ಧರ್ಮ ಸಂದೇಶ ನೀಡಲಿದ್ದಾರೆ. ಟ್ರಸ್ಟ್‍ನ ಅಧ್ಯಕ್ಷ ಕೆ. ಶಾಂತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ದ.ಕ., ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಎ. ಸುವರ್ಣ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಾಪು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉಡುಪಿ ಶೀತಲ್ ಟ್ರಾವೆಲ್ಸ್ ನ ಮಾಲಕ ಶ್ರೀಕಾಂತ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಂಸ್ಕøತಿಕ ಕಾರ್ಯಕ್ರಮಗಳು ಸಂಜೆ 7 ಗಂಟೆಯಿಂದ ಆರಂಭಗೊಳ್ಳಲಿದ್ದು, ಕಲರ್ಸ್ ಕನ್ನಡ ಖ್ಯಾತಿಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಬಳಗದವರಿಂದ ‘ಶಿವಸ್ತುತಿ ಗಾನಾಮೃತ’ ನಡೆಯಲಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರ https://youtu.be/6LX7glDlI5o ಟ್ಯೂಬ್‌ ಚಾನಲ್ ನಲ್ಲಿ

Leave a Reply

Your email address will not be published. Required fields are marked *

error: Content is protected !!