ಉಡುಪಿ ಮಹಿಳಾ ಕಾಂಗ್ರೆಸ್: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಉಡುಪಿ: ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉಡುಪಿಯ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಲೇಖಕಿ ಅಮೃತಾ ಶೆಟ್ಟಿ ಅವರು ಮಾತನಾಡಿ, ಸ್ತ್ರೀಯನ್ನು ದೇವರಾಗಿ ಕಾಣಬೇಡಿ ಬದಲಾಗಿ ಸ್ತ್ರೀಯನ್ನು ಸ್ತ್ರೀಯಾಗಿ ನೋಡಿ. ಹೆಣ್ಣು ಗಂಡಿಗೆ ಸರಿಸಮವಾಗಿ ಕೆಲಸ ಮಾಡಬಲ್ಲಳು ಎಂಬುದನ್ನು ಈಗಾಗಲೇ ಹಲವಾರು ಸಾಧಕ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಶೈಕ್ಷಣಿಕ ಕಲಿಕೆಯಲ್ಲಿ ಗಂಡು ಮತ್ತು ಹೆಣ್ಣು ವಿರೋಧ ಪದ ಎಂದು ಹೇಳಿಕೊಡುತ್ತಾರೆ. ಆದರೆ ಹೆಣ್ಣು, ಗಂಡು ಹೇಗೆ ವಿರೋಧ ಪದವಾಗುತ್ತದೆ ಎಂದು ಪ್ರಶ್ನಿಸಿದ ಅವರು, ಹೆಣ್ಣು ಮತ್ತು ಗಂಡು ಪೂರಕ ಪದಗಳು. ಗಂಡು ಮತ್ತು ಹೆಣ್ಣು ಇಬ್ಬರು ಸರಿಸಮಾನರು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು, ಜಿಲ್ಲೆಯ 6 ಬ್ಲಾಕ್ ಕಾಂಗ್ರೆಸ್ನ 6 ಸಾಧಕ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಡಾ.ಕಾಂತಿ ಹರೀಶ್ ಅವರಿಗೆ ಇಂದಿರ ಪ್ರಿಯದರ್ಶಿನಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಆಸ್ಕರ್ ಫೆರ್ನಾಂಡಿಸ್ ಅವರ ಆಪ್ತ ಸಹಾಯಕ ಉದ್ಯಾವರ ನಾಗೇಶ್ ಕುಮಾರ್, ವೆರೋನಿಕ ಕರ್ನೆಲಿಯೋ, ರೋಶಿನಿ ಒಲೆವಿರಾ, ಸರಳ ಕಾಂಚನ್, ಅಮೃತಾ ಕೃಷ್ಣಮೂರ್ತಿ ಆಚಾರ್ಯ, ಮೀನಾಕ್ಷಿ ಮಾಧವ ಬನ್ನಂಜೆ, ಪುಷ್ಪ ಅಂಚನ್ , ಜ್ಯೋತಿ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.