ಉಳ್ಳಾಲ: ಸಂಶಯಾಸ್ಪದವಾಗಿ ಯುವತಿಯ ಸಾವು
ಉಳ್ಳಾಲ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಯುವತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಉಳ್ಳಾಲದ ಕುಂಪಲ ಆಶ್ರಯ ಕಾಲನಿಯಲ್ಲಿ ನಡೆದಿದೆ.
ಚಿತ್ತಪ್ರಸಾದ್ ಎಂಬವರ ಪುತ್ರಿ ಪ್ರೇಕ್ಷಾ(20) ಮೃತಪಟ್ಟಿರುವ ಯುವತಿ. ಈಕೆಯ ತಾಯಿ ಅಂಗನವಾಡಿಯೊಂದಕ್ಕೆ ಕೆಲಸಕ್ಕೆ ತೆರಳಿದ್ದರು. ಇಂದು ಮಧ್ಯಾಹ್ನ ಅವರು, ಊಟಕ್ಕೆಂದು ಮನೆಗೆ ಬಂದು ನೋಡಿದಾಗ ಮನೆಯೊಳಗಿನ ಕೋಣೆಯಲ್ಲಿ ಪ್ರೇಕ್ಷಾ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದೀಗ ಘಟನೆಗೆ ಸಂಬಂದಿಸಿದಂತೆ ಸ್ಥಳೀಯರು ಇದು ಕೊಲೆಯಾಗಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.