ಉಡುಪಿ: ‘ರಾಂಗ್ ಡೇಟ್’ ಚಲನಚಿತ್ರದ ಪೋಸ್ಟ್ ರ್ ಬಿಡುಗಡೆ
ಉಡುಪಿ: ಹೊಸಬರ ತಂಡದೊಂದಿಗೆ ಹೊಸ ಪ್ರಯತ್ನದಲ್ಲಿ ಮೂಡಿಬರುತ್ತಿದೆ ‘ರಾಂಗ್ ಡೇಟ್’ ಎಂಬ ಹೊಚ್ಚ ಹೊಸ ಚಿತ್ರ. ಇದೀಗ ಚಿತ್ರದ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದೆ ಚಿತ್ರ ತಂಡ.
ಉಡುಪಿಯಲ್ಲಿ ಚಿತ್ರದ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ನಿರ್ದೇಶನ ಸಚಿನ್ ಕೋಟ್ಯಾನ್ ಅವರು ಪ್ರಸ್ತುತ ಕಾಲ ಘಟ್ಟಲ್ಲಿ ನಡೆಯುತ್ತಿರುವ ಹಾಗೂ ಹೋಗುಗಳು, ಯುವಪೀಳಿಗೆ ಸಾಮಾಜಿಕ ಜಾಲತಾಣದಲ್ಲಿ ಯಾವ ರೀತಿ ಸಕ್ರಿಯವಾಗಿದೆ, ಅದರಿಂದ ಯುವ ಪೀಳಿಗೆ ಮೇಲಾಗುತ್ತಿರುವ ಸಾಧಕ ಬಾಧಕಗಳು ಕುರಿತು ವಿಭಿನ್ನ ಸ್ಕ್ರೀನ್ ಪ್ಲೇ ಮೂಲಕ ಪ್ರೇಕರಿಗೆ ತೋರಿಸಲು ಪ್ರಯತ್ನಿಸಿದ್ದೇವೆ. ಹೊಸಬರ ತಂಡದ ಮೂಲಕ ಚಿತ್ರದಲ್ಲಿ ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಲು ಪ್ರಯತ್ನಿಸಲಾಗಿದೆ. ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಚಿತ್ರ ಬರಲಿದೆ ಎಂದರು. ಈ ವೇಳೆ ಚಿತ್ರತಂಡದ ಸದಸ್ಯರು ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು.
ಸೈಕಲಾಜಿಕಲ್ ಕಥಾನಕವನ್ನು ಒಳಗೊಂಡಿರುವ ಈ ಚಿತ್ರದ ಚಿತ್ರಕತೆ, ಸಂಭಾಷಣೆ, ಹಾಗೂ ನಿರ್ದೇಶನ ಸಚಿನ್ ಕೋಟ್ಯಾನ್ ಅವರದ್ದು, ಈ ಚಿತ್ರಕ್ಕೆ ಉದ್ಯಮಿ ಅಶೋಕ್ ಕೋಟ್ಯಾನ್ ಮುಂಬೈ ಬಂಡವಾಳ ಹೂಡಿದ್ದು, ಶಶಿಧರ್ ದೇವಾಡಿಗ ಸಿನೆಮಾಟೊಗ್ರಾಫಿಯ ಜವಾಬ್ದಾರಿಯನ್ನು ನೆರವೇರಿಸಿದ್ದಾರೆ. ಇನ್ನು ಮಣಿಪಾಲದ ಆಸುಪಾಸಿನಲ್ಲೇ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ನಿಶಾ ಯಶ್ ರಾಮ್, ಅಕ್ಷಯ್ ಕಾರ್ಕಳ, ಡೆಲ್ಫಿ ಪ್ರಿಯಾಂಕ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ರಾಹುಲ್ ವಸಿಷ್ಟ ಸಂಗೀತ ನೀಡಿದ್ದು, ಶಂಕರ ನಾರಾಯಣ ಪೆರ್ಡೂರು ಸಂಕಲನಕಾರರಾಗಿ ಹಾಗೂ ನಿರ್ಮಾಣ ವ್ಯವಸ್ಥಾಪಕರಾಗಿ ಕೀರ್ತೆಶ್ ಕುಕ್ಕುಂದೂರು ಕಾರ್ಯನಿರ್ವಹಿಸಿದ್ದಾರೆ.
ಈ ಸಂದರ್ಭ ಪತ್ರಿಕಾ ಗೋಷ್ಟಿಯಲ್ಲಿ ಚಿತ್ರ ತಂಡದ ಸದಸ್ಯರು ಉಪಸ್ಥಿತರಿದ್ದರು.
Why no actress on stage?
Best of Luck.