ಕಾಪು: ಮಾ.13 ಪೊಲಿಪು ದರ್ಗಾ ಉರೂಸ್, 14 ರಂದು ಖಾಝಿ ಸ್ವೀಕಾರ

ಕಾಪು: ನಗರದ ಸಯ್ಯದ್ ಶಂಸುದ್ದೀನ್ ವಲಿಯುಲ್ಲಾಹಿರವರ ದರ್ಗಾದ ಉರೂಸ್ ಕಾರ್ಯಕ್ರಮವು ಮಾರ್ಚ್ 13 ರಂದು ನಡೆಯಲಿದೆ ಎಂದು ಜಮಾತ್ ಕಮಿಟಿ ಉಪಾಧ್ಯಕ್ಷ ಅಮೀರ್ ಹಂಝ ಹೇಳಿದ್ದಾರೆ.

ಕಾಪು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಅಲ್ ಹಾಜ್ ಪಿ.ಬಿ ಅಹಮದ್ ಮುಸ್ಲಿಯಾರ್(ಕಾಪು ಉಸ್ತಾದ್) ಇವರು ಧ್ವಜಾರೋಹಣ ಮಾಡುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆ ಬಳಿಕ ಸಂದಲ್ ಮೆರವಣಿಗೆ ನಡೆಯಲಿದ್ದು, ಮಗ್ರಿಬ್ ನಮಾಝಿನ ಬಳಿಕ ಸೈಯದ್ ಶಂಸುದ್ದೀನ್ ವಲಿಯುಲ್ಲಾರವರ ಕುಟುಂಬಸ್ಥರಾದ ಸೈಯದ್ ಸಿರಾಜುದ್ದೀನ್ ಬಾ ಅಲವಿ ತಂಗಲ್ ರವರ ನೇತೃತ್ವದಲ್ಲಿ ಸಾಮೂಹಿಕ ಕೂಟು ಝಿಯಾರತ್ ನೆರವೇರಲಿದೆ ಎಂದರು.

ಸಭಾ ಕಾರ್ಯಕ್ರಮವನ್ನು ಅಲ್ ಹಾಜ್ ಪಿಬಿ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಅಮೀರ್ ಹಂಝ ಇವರು ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಾಸ್ಟರ್ ಅವರನ್ನು ಸ್ವಾಗತಿಸಲಿದ್ದಾರೆ. ಇಶಾ ನಮಾಜಿನ ಬಳಿಕ ಬಹು ಹುಸೇನ್ ಅಹ್ಸನಿ ಮೂಈನ್ ಇವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ ಎಂದರು.
ಪೊಲಿಪು ಜಾಮಿಯಾ ಮಸೀದಿಯಲ್ಲಿ ಕಳೆದ ಸುಮಾರು 52 ವರ್ಷಗಳ ಕಾಲ ಧಾರ್ಮಿಕ ಸೇವೆಯನ್ನು ಮಾಡಿರುವಂತಹ ಪಿಬಿ ಅಹ್ಮದ್ ಮುಸ್ಲಿಯಾರ್( ಕಾಪು ಉಸ್ತಾದ್) ಇವರನ್ನು ಕಾಪು ಮೊಹಲ್ಲಾದ ಖಾಝಿ ಯಾಗಿ ನೇಮಕ ಮಾಡಲು ಜಮಾತ್ ಬಾಂಧವರು ತೀರ್ಮಾನಿಸಿದ್ದು, ಅದರಂತೆ ಮಾರ್ಚ್ 14 ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಯವರಾದ ಬಹುಮಾನ್ಯ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ರವರ ನೇತೃತ್ವದಲ್ಲಿ ಪಿಬಿ ಅಹ್ಮದ್ ಮುಸ್ಲಿಯಾರ್( ಕಾಪು ಉಸ್ತಾದ್) ಇವರು ಖಾಝಿ ಸ್ವೀಕಾರ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಸಯ್ಯದ್ ಜಾಫರ್ ಅಸ್ಸಖಾಫ್ ತಂಙಲ್ ಕೋಟೇಶ್ವರ ರವರು ದುಆ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಸೈಯದ್ ಕೆಪಿಎಸ್ ಝೈನುಲ್ ಆಬಿದೀನ್ ಜಮಾಲುಲ್ಲೈಲ್ ತಂಙಳ್ ಕಾಜೂರು ಅವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಜಮಾತ್ ಸಹಾಯಕ ಖಾಝಿಯವರಾದ ಅಬೂ ಶಾಕಿರ್ ಅಬ್ದುಲ್ ರಹಮಾನ್ ಮದನಿ ಮೂಳೂರು ಹಾಗೂ ಸಂಯುಕ್ತ ಜಮಾತ್ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ನೇಜಾರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಅಮೀರ್ ಹಂಝ ಇವರು ವಹಿಸಲಿದ್ದು,ಸ್ಥಳೀಯ ಎಲ್ಲಾ ಮಸೀದಿಗಳ ಖತೀಬರುಗಳು ಉಪಸ್ಥಿತರಿರಲಿದ್ದಾರೆ ಎಂದು  ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!