ಖಾಸಗಿ ವೈದ್ಯಕೀಯ ಆರೋಗ್ಯ ಸಂಸ್ಥೆ ನೋಂದಣಿಗೆ ಮಾ.31 ಗಡುವು: ಡಾ.ರಾಜೇಂದ್ರ ಕೆ.ವಿ

ಮಂಗಳೂರು, ಮಾ. 09: ಕರ್ನಾಟಕ ಖಾಸಗಿ ವೈದ್ಯಕೀಯ ನೋಂದಣಿ ಪ್ರಾಧಿಕಾರದ (ಕೆ.ಪಿ.ಎಂ.ಇ) ಅಡಿಯಲ್ಲಿ ಖಾಸಗಿ ವೈದ್ಯಕೀಯ ಆರೋಗ್ಯ ಸಂಸ್ಥೆಗಳು ಮಾರ್ಚ್ 31 ರ ವರೆಗೆ ನೋಂದಣಿ ಮಾಡಿಕೊಳ್ಳಲು ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ.ವಿ ತಿಳಿಸಿದರು.

ಅವರು ಸೋಮವಾರ ತಮ್ಮ ಕಚೇರಿಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಖಾಸಗಿ ವೈದ್ಯಕೀಯ ನೋಂದಣಿ ಪ್ರಾಧಿಕಾರದ ಸಭೆ, ಂಃ-ಂಖಏ ಹಾಗೂ ಮಂಗನ ಕಾಯಿಲೆ ನಿಯಂತ್ರಣ ಕಾರ್ಯಕ್ರಮದ ಕುರಿತ ಅಂತರ್ ಇಲಾಖಾ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಂಃ-ಂಖಏ  ನೋಂದಾಯಿತ ಇತರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರುಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ನವೀಕರಣದ ಅಡಿಯಲ್ಲಿ 462 ಸಂಸ್ಥೆಗಳ ನವೀಕರಣ ಬಾಕಿ ಇದ್ದು, 147 ಸಂಸ್ಥೆಗಳ ನವೀಕರಣ ಪ್ರಗತಿಯಲ್ಲಿದೆ. 45 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದ್ದು, 270 ಸಂಸ್ಥೆಗಳಿಗೆ ದೂರವಾಣಿ ಮೂಲಕ ಸೂಚಿಸಲಾಗಿದೆ ಎಂದ ಅವರು, ಈಗಾಗಲೇ ನೋಂದಣಿ ಮತ್ತು ನವೀಕರಣ ಮಾಡಲು ಬಾಕಿ ಇರುವ ಖಾಸಗಿ ವೈದ್ಯಕೀಯ ಆರೋಗ್ಯ ಸಂಸ್ಥೆಗಳು ಪ್ರಸ್ತುತ ಸಾಲಿನ ಮಾರ್ಚ್ 31 ರ ವರೆಗೆ ಕೊನೆಯ ಕಾಲಾವಕಾಶವನ್ನು ನೀಡಲಾಗಿದೆ ಎಂದರು.

ಕೇರಳ ರಾಜ್ಯ ಸೇರಿದಂತೆ ಹೊರಜಿಲ್ಲೆಗಳಿಂದ ಬರುವ ವೃತ್ತಿಪರರು, ಪ್ರವಾಸಿಗರು, ವಿದ್ಯಾರ್ಥಿಗಳು ಸೇರಿದಂತೆ ಚಿಕಿತ್ಸೆಗಾಗಿ ಬರುವವರು ಹಾಗೂ ಎಲ್ಲಾ ರೀತಿಯ ವಾಹನ ಸವಾರರಿಗೂ ಕೋವಿಡ್ ತಪಾಸಣೆ  ನಡೆಸಿ, ಅವರಲ್ಲಿ ಐ.ಎಲ್.ಐ ಮತ್ತು ಸಾರಿ ಪ್ರಕರಣಗಳು ಕಂಡುಬಂದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಖಖಿ-Pಅಖ ಪರೀಕ್ಷೆಯನ್ನು ಮಾಡಬೇಕು ಎಂದ ಅವರು, ಇದರ ಬಗ್ಗೆ ಎಲ್ಲಾ ಖಾಸಗಿ ಆಸ್ಪತ್ರೆಗಳಿಂದ IಐI ಹಾಗೂ SಂಖI ಪ್ರಕರಣಗಳ ವರದಿಗಳನ್ನು ದಿನನಿತ್ಯ ಈ ಹಿಂದೆ ತಿಳಿಸಿರುವಂತೆ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡುವಂತೆ ಸೂಚಿಸಿದರು.

ರೋಗ ಲಕ್ಷಣ ಕಡಿಮೆ ಇರುವ ಪ್ರದೇಶದ ಬಗ್ಗೆ ಮಾಹಿತಿ ಕಲೆ ಹಾಕಿ ಆ ಪ್ರದೇಶದಲ್ಲಿ ಪ್ರಕರಣಗಳು ಕಡಿಮೆಯಾಗಿರುವ ಬಗ್ಗೆ ಅಥವಾ ಪ್ರಕರಣಗಳು ಇದ್ದೂ ನೋಂದಣಿಯಾಗದಿರುವ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯಲು ಹೆಚ್ಚು ಕೋವಿಡ್ ಟೆಸ್ಟ್‍ಗಳನ್ನು ಮಾಡಬೇಕು ಎಂದರು. ಎಲ್ಲಾ ಐ.ಎಲ್.ಐ ಮತ್ತು ಸಾರಿ ಪ್ರಕರಣಗಳ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಪಡೆಯದಿದ್ದ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಲಾಕ್‍ಡೌನ್ ಸಮಸ್ಯೆಯನ್ನು ಮತ್ತೊಮ್ಮೆ ಎದುರಿಸಬೇಕಾಗುತೆ,್ತ ಇಂತಹ ಸಂದರ್ಭಗಳಲ್ಲಿ ಎರಡನೇ ಅಲೆಯನ್ನು ತಡೆ ಹಿಡಿಯುವ ನಿಟ್ಟಿನಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೇ ಪಾಲನೆ ಮಾಡಬೇಕು ಎಂದರು.

ಫೈರ್ ಸೇಫ್ಟಿ ಮತ್ತು ಇಲೆಕ್ಟ್ರಿಕಲ್ ಆಡಿಟ್‍ನ್ನು ಕಾಲಕಾಲಕ್ಕೆ ಸೂಕ್ತ ಪ್ರಾಧಿಕಾರದಿಂದ ತಪ್ಪದೇ ಮಾಡಿಸಬೇಕು.  ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಫೈರ್ ಸೇಫ್ಟಿ ಅಳವಡಿಸಬೇಕು ಒಂದು ವೇಳೆ ಪರಿಶೀಲನೆ ಸಂದರ್ಭದಲ್ಲಿ ಫೈರ್ ಸೇಫ್ಟಿ ಅಳವಡಿಸದಿದ್ದಲ್ಲಿ ಒಂದು ತಿಂಗಳ ಕಾಲಾವಕಾಶ ನೀಡಬೇಕು ನಂತರವೂ ಅವರು ಜಾಗೃತರಾಗದಿದ್ದಲ್ಲಿ ಅಂತಹ ಆಸ್ಪತ್ರೆಗಳ ಪರವಾನಿಗೆಯನ್ನು ರದ್ದುಮಾಡಬೇಕು ಎಂದು ಸೂಚನೆ ನೀಡಿದರು.
ಕೆ.ಪಿ.ಎಂ.ಇ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 1884 ಖಾಸಗಿ ವೈದ್ಯಕೀಯ ಸಂಸ್ಥೆಗಳು ದಾಖಲಾಗಿದ್ದು,  ಈಗಾಗಲೇ 1098 ಸಂಸ್ಥೆಗಳಿಗೆ ಭೇಟಿ ನೀಡಲಾಗಿದೆ. 515 ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದು, 74 ಸಂಸ್ಥೆಗಳಿಗೆ ಸಣ್ಣ ಪುಟ್ಟ ತಪ್ಪುಗಳಿಗೆ ನೋಟಿಸ್ ನೀಡಲಾಗಿದೆ ಎಂದರು.

2017 ನೇ ಸಾಲಿನಿಂದ ಜಿಲ್ಲೆಯಲ್ಲಿ ನವೀಕರಣಕ್ಕೆ ಬಾಕಿ ಇರುವ ಸಂಸ್ಥೆಗಳಿಗೆ ಈಗಾಗಲೇ ಹೊಸದಾಗಿ ನವೀಕರಣ ಮಾಡಲು ಸೂಚಿಸಲಾಗಿದೆ ಎಂದರು.
ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಯಾವುದೇ ರೀತಿಯ ದೂರುಗಳು ಬಂದಲ್ಲಿ ಜಿಲ್ಲಾಡಳಿತವು ಅನೀರಿಕ್ಷಿತವಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ ಎಂದ ಅವರು, ಭೇಟಿ ಸಂದರ್ಭದಲ್ಲಿ ಅಸ್ಪತ್ರೆಯಲ್ಲಿ ದರಪಟ್ಟಿಯನ್ನು ಅಳವಡಿಸದೇ ಇರುವುದು ಕಂಡುಬಂದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ಯಾವುದೇ ಸೂಚನೆ ನೀಡದೇ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳ ವಿವರವನ್ನು ಪಡೆದು ಮಾತನಾಡಿ, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‍ಗಳನ್ನು  ಹೆಚ್ಚು ಹೆಚ್ಚು ಂಃ-ಂಖಏ ಯೋಜನೆಯಡಿಯಲ್ಲಿ ಎಂಪ್ಯಾನೆಲ್‍ಮೆಂಟ್ ಮಾಡಿಕೊಳ್ಳುವಂತೆ ತಿಳಿಸಿದರು. ಜಿಲ್ಲೆಯಲ್ಲಿ 20 ಆಸ್ಪತ್ರೆಗಳು ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಯಾಗಿದ್ದು, ತುರ್ತು ಸಂದರ್ಭದಲ್ಲಿ ರೋಗಿಯು ಆಸ್ಪತ್ರೆಗೆ ದಾಖಲಾಗಿ 24 ಗಂಟೆಗಳಲ್ಲಿ ಮರಣ ಹೊಂದಿದ್ದಲ್ಲಿ ಅಂತಹ ರೋಗಿಯಿಂದ ಯಾವುದೇ ರೀತಿಯಲ್ಲಿ ಹಣ ಸಂಗ್ರಹಣೆ ಮಾಡಬಾರದು. ಅವರಿಗೆ ಆಯುಷ್ಮಾನ್ ಯೋಜನೆಯ ಸಂಪೂರ್ಣ ಸೌಲಭ್ಯ ನೀಡಬೇಕು ಎಂದು ಸೂಚಿಸಿದರು.

ಆಸ್ಪತ್ರೆಗೆ ಬರುವ ರೋಗಿಗಳಿಂದ ಅಧಿಕ ಮುಂಗಡ ಹಣವನ್ನು ಸಂಗ್ರಹಣೆ ಮಾಡದೇ ಅವರ ಚಿಕಿತ್ಸೆಗೆ ಅಗತ್ಯವಿರುವ ಪ್ಯಾಕೇಜ್‍ನ ಹಣವನ್ನು ಪಡೆದು ಚಿಕಿತ್ಸೆ ನೀಡಬೇಕು, ದುಬಾರಿ ವೆಚ್ಚ ಪಾವತಿಸುವಂತೆ ಬೇಡಿಕೆ ಇಡಬಾರದು. ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಇದ್ದರೂ ರೋಗಿಗಳನ್ನು ದಾಖಲಾತಿ ಮಾಡಿಕೊಳ್ಳದಂತಹಾ ಸಂದರ್ಭದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕ್ಯಾಸನೂರು ಕಾಡಿನ ಕಾಯಿಲೆ/ಮಂಗನ ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಕಾಡುಗಳಲ್ಲಿ ಮಂಗಗಳು ಸತ್ತು ಅವುಗಳ ಕಳೆ ಬರಹದಿಂದ ಉಂಟಾಗುವ ಚಿಗಟೆಗಳು ಕಾಡುಗಳಿಗೆ ಮೇಯಲು ಹೋಗುವ ಜಾನುವಾರುಗಳ ಮೇಲೆ ಹತ್ತಿ ನಂತರದಲ್ಲಿ ಜನರಿಗೆ ಚಿಗಟೆಗಳು ಕಡಿಯುವುದರಿಂದ ಮಂಗನ ಕಾಯಿಲೆ ರೋಗವು ಹರಡುತ್ತದೆ. ಇವುಗಳ ನಿಯಂತ್ರಣಕ್ಕೆ ಪಶು ಸಂಗೋಪನೆ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳು ಸಮನ್ವಯದೊಂದಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಚಂದ್ರ ಬಾಯರಿ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ನೋಡಲ್ ಅಧಿಕಾರಿ ಡಾ. ರತ್ನಾಕರ್, ವಿಭಾಗೀಯ ಸಂಯೋಜಕಿ ಡಾ. ನೌಶದ್ ಬಾನು, ಅಗ್ನಿಶಾಮಕ ಇಲಾಖೆಯ ಅಧಿಕಾರಿ ಭರತ್ ಕುಮಾರ್, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷೆ ಡಾ. ದೀಪಾ ಪ್ರಭು, ಜಿಲ್ಲಾ ತಪಾಸಣ ಮೇಲ್ವಿಚಾರಣಾ ಸಮಿತಿಯ ಸದಸ್ಯರಾದ ಡಾ.ಅನಿತಾರಾಜ್ ಭಟ್, ಡಾ. ಚಿದಾನಂದ್ ಮೂರ್ತಿ, ಡಾ. ಅಮೃತ ಭಂಡಾರಿ, ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷೆ ಡಾ. ವತ್ಸಲಾ ಕಾಮತ್, ಜಿಲ್ಲಾ ಸಲಹಾ ಸಮಿತಿಯ ಸದಸ್ಯರಾದ ಡಾ. ಶೈಲಜಾ, ಡಾ. ರವಿಚಂದ್ರ, ಶೆರ್ಲಿ. ಟಿ. ಬಾಬು, ವಸಂತ ಪೆರಾಜೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!