ಸಮುದ್ರದಲ್ಲಿ ತೇಲಿ ಬಂದ ಬಾಟಲ್, ವಿದೇಶಿ ಮದ್ಯ ಎಂದು ಕುಡಿದ 3 ಮೀನುಗಾರರ ಮೃತ್ಯು
ಚೆನ್ನೈ: ಸಮುದ್ರದಲ್ಲಿ ತೇಲಿ ಬಂದ ಬಾಟಲ್ ನಲ್ಲಿರುವುದು ವಿದೇಶಿ ಮದ್ಯ ಎಂದು ಕುಡಿದು ಮೂವರು ಮೀನುಗಾರರು ಮೃತಪಟ್ಟ ಘಟನೆ ತಮಿಳುನಾಡಿನ ರಾಮೇಶ್ವರದಲ್ಲಿ ನಡೆದಿದೆ. ಮೃತರನ್ನು ರಾಮೇಶ್ವರಂ ಬಳಿಯ ತಂಗಾಚಿಮಡಂನ ಆಂತೋನಿಸಾಮಿ (38) ಅರೋಕಿಯಾ ಪ್ರೋಹಿತ್ (50) ಹಾಗೂ ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ.
ಮೀನುಗಾರಿಕೆಗೆಂದು ಈ ಮೂವರು ಮೀನುಗಾರರು ಬೋಟ್‍ನಲ್ಲಿ ಸಮುದ್ರಕ್ಕೆ ತೆರಳಿದ್ದರು. ಈ ವೇಳೆ ಮೀನುಗಾರಿಕೆ ನಡೆಸುತ್ತಿದ್ದಾಗ ಸಮುದ್ರದಲ್ಲಿ ಬಾಟಲ್‍ವೊಂದು ತೇಲಿ ಬರುತ್ತಿರುವುದನ್ನು ನೋಡಿದ ಇವರು, ಬಾಟಲ್‍ನಲ್ಲಿರುವುದು ವಿದೇಶಿ ಮದ್ಯ ಎಂದು ಕುಡಿದಿದ್ದಾರೆ.
ಈ ವೇಳೆ ಮೂವರು ಅಸ್ವಸ್ಥಗೊಂಡಿದ್ದಾರೆ. ಈ ಮೂವರ ಪೈಕಿ ಆಂತೋನಿಸಾಮಿ ತೀರಕ್ಕೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಇನ್ನು ಅರೋಕಿಯಾ ಪ್ರೋಹಿತ್ ಹಾಗೂ ವಿನೋದ್ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಕರಾವಳಿ ಭದ್ರತಾ ಪಡೆ ಪೊಲೀಸರು ಮತ್ತು ಇತರ ಅಧಿಕಾರಿಗಳು ಈ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Please give me best price add.
inbox( [email protected])