ಉಳ್ಳಾಲ: ನವ ವಿವಾಹಿತ ಹೃದಯಾಘಾತದಿಂದ ಮೃತ್ಯು
ಉಳ್ಳಾಲ: ನವ ವಿವಾಹಿತರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಉಳ್ಳಾಲದ ಕುಂಪಲದಲ್ಲಿ ಮಾ.8 ರ ರಾತ್ರಿ ನಡೆದಿದೆ. ಕುಂಪಲ ಬಳಿಯ ಬಾರ್ದೆ ನಿವಾಸಿ ಲವಿತ್ ಕುಮಾರ್ (34) ಸಾವನ್ನಪ್ಪಿದ ನವ ವಿವಾಹಿತ.
ಇಲೆಕ್ಟ್ರೀಷಿಯನ್ ವೃತ್ತಿ ನಡೆಸುತ್ತಿದ್ದ ಲವಿತ್ ಕುಮಾರ್ ಜನವರಿ 18 ರಂದು ಸವಿತಾರನ್ನು ವಿವಾಹವಾಗಿದ್ದರು. ನಿನ್ನೆ ರಾತ್ರಿ ಲವಿತ್ ಅವರಿಗೆ ತೀವ್ರ ಎದೆ ನೋವು ಕಾಣಿಸಿದ್ದು ಕೂಡಲೇ ತೊಕ್ಕೊಟ್ಟಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳಿಕ ವೈದ್ಯರ ಸಲಹೆ ಮೇರೆಗೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿಸಲಾಗಿತ್ತು. ಆಸ್ಪತ್ರೆಯಲ್ಲಿ ಲವಿತ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.