ಕೊರೋನಾಗಿಂತಲೂ ‘ಲವ್ ಜಿಹಾದ್’ ಭೀಕರವಾಗಿದೆ: ವೀಣಾ ಶೆಟ್ಟಿ
ಉಡುಪಿ: ಇತ್ತೀಚೆಗೆ ನಡೆದ ಲವ್ ಜಿಹಾದ್ ಪ್ರಕರಣದಿಂದ ಜನಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. “ಜಿಹಾದ್”ಎನ್ನುವ ಮೂರು ಅಕ್ಷರದ ಪದ ಕೊರೋನಾ ಎಂಬ ವೈರಸ್ ಗಿಂತಲೂ ಭೀಕರವಾಗಿದೆಂದು ಉಡುಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ಹೇಳಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ನಾಶ ಮಾಡುಲು ಕೆಲವು ಮತಾಂಧರ ವ್ಯವಸ್ಥಿತ ಸಂಚು ಈ ಲವ್ ಜಿಹಾದ್. ಅಮಾಯಕ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಅವರ ಬಾಳಲ್ಲಿ ಪ್ರೀತಿಯ ನಾಟಕವಾಡಿ ಮತಾಂತರಗೊಳಿಸಿ ಅವರ ಬದುಕನ್ನು ಛಿಧ್ರಗೊಳಿಸುವ, ಹಿಂದೂ ಸಮಾಜವನ್ನು ಅಸ್ಥಿರವಾಗಿಸುವ ಈ ಸಂಚನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಲಾಕ್ ಡೌನ್ ಸಮಯದಲ್ಲಿ ನಡೆದ ಈ ಲವ್ ಜಿಹಾದ್ ಕರಾವಳಿ ಎಲ್ಲಾ ತಂದೆ ತಾಯಂದಿರಿಗೆ ಎಚ್ಚರಿಕೆಯ ಗಂಟೆ. ಮನೆಯೇ ಮೊದಲ ಪಾಠಶಾಲೆ ಎನ್ನುವುದನ್ನು ನೆನಪಿಟ್ಟುಕೊಂಡು ಪೋಷಕರು ಕೂಡ ತಮ್ಮ ಮಕ್ಕಳ ಮೇಲೆ ಸೂಕ್ತ ಗಮನ ಹರಿಸಬೇಕು. ಭಾರತೀಯ ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವುದು ಎಲ್ಲಾ ಭಾರತೀಯರ ಜವಾಬ್ದಾರಿ. ಜಿಲ್ಲೆಯಲ್ಲಿ ಇನ್ನು ಮುಂದೆ ಲವ್ ಜಿಹಾದ್ ನಂತಹ ಪ್ರಕರಣಗಳು ಕಂಡುಬಂದರೆ ಇದಕ್ಕೆ ಕಾರಣರಾದ ಮತಾಂಧರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಮಲ್ಪೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ಆರೋಪಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೀಣಾ ಎಸ್. ಶೆಟ್ಟಿ ಒತ್ತಾಯಿಸಿದ್ದಾರೆ. |
If arrange marriage is there then girls need doctor , engineer.
If love marriage then any road side guy of any caste ok.
Girls who don’t care about their parents status in society, why should they care you.
ಕೆಡುಕಿನ ನಿರ್ಮೂಲನೆಗಾಗಿ ಪರಿಶ್ರಮಿಸುವುದು ಜಿಹಾದ್ ನ ಅರ್ಥ. ಇದನ್ನರಿಯದೆ ಜಿಹಾದ್ ಪದ ಬಳಸುವವರು ಏನು ಪ್ರಮಾದ ಮಾಡುತ್ತಿದ್ದಾರೆಂಬುದನ್ನಾದಲೂ ಅರಿಯಬೇಕು
Arem siddik avre hagadre nim prakara hindu hennu makkalu love jihad emba jaala dalli biddu satru paravagilva