ಬ್ರಹ್ಮಾವರ: ಮಾ.7 ರಂದು ಸತ್ಯನಾಥ ಸ್ಟೊರ‍್ಸ್ ಶುಭಾರಂಭ
ಬ್ರಹ್ಮಾವರ: ವಸ್ತ್ರ ಪ್ರಿಯರಿಗೊಂದು ಸಿಹಿ ಸುದ್ಧಿ. ಬ್ರಹ್ಮಾವರದಲ್ಲಿ ನೂತನವಾಗಿ ತೆರೆದುಕೊಳ್ಳುತ್ತಿದೆ ವಿಶಾಲವಾದ ಬೃಹತ್ ವಸ್ತ್ರ ಭಂಡಾರ.
ಹೌದು…… ಬ್ರಹ್ಮಾವರದ ಮಾರಿಗುಡಿ ರಸ್ತೆಯ ಪುರುಷೋತ್ತಮ ಮಂದಿರದ ನೂತನ ಕಟ್ಟಡದಲ್ಲಿ ಮಾ.7 ರಂದು ಶುಭಾರಂಭಗೊಳ್ಳುತ್ತಿದೆ ಆಧುನಿಕ ಶೈಲಿನ ವಸ್ತ್ರಗಳ ನೂತನ ಮಳಿಗೆ ಸತ್ಯನಾಥ ಸ್ಟೊರ‍್ಸ್.
ಈ ನೂತನ ವಸ್ತ್ರ ಮಳಿಗೆಯನ್ನು ಬೆಳಗ್ಗೆ 9ಕ್ಕೆ ಸಾಬರಕಟ್ಟೆ ಗರಿಕೆಮಠ ಶ್ರೀ ಅರ್ಕ ಮಹಾಗಣಪತಿ ದೇವಸ್ಥಾನದ ವೇದ ಮೂರ್ತಿ ಜಿ. ರಾಮ ಪ್ರಸಾದ ಅಡಿಗ ಅವರು ಉದ್ಘಾಟಿಸಲಿದ್ದಾರೆ.
30,000 ಚದರ ಅಡಿಯ ವಿಸ್ತೀರ್ಣದಲ್ಲಿ ನಾಲ್ಕು ಅಂತಸ್ತಿನಲ್ಲಿ ಹವಾನಿಯಂತ್ರಿತ ಮಳಿಗೆಯಲ್ಲಿ ಗ್ರಾಹಕರಿಗೆ ಸಿಗಲಿದೆ ಸೀರೆಗಳು, ಟೆಕ್ಸ್ ಟೈಲ್ಸ್, ಹ್ಯಾಂಡ್ ಲೂಮ್ಸ್, ರೆಡಿಮೇಡ್ಸ್ ವಸ್ತ್ರಗಳು. ಇಪ್ಪತ್ತಕ್ಕೂ ಅಧಿಕ ರಾಜ್ಯಗಳಿಂದ ಸಂಗ್ರಹಿಸಲ್ಪಟ್ಟ ವೈವಿಧ್ಯಮಯ ಜವಳಿ ಸಂಗ್ರಹ, ಪರಿಪೂರ್ಣ ಮದುವೆ ಜವಳಿ ಮಳಿಗೆ, ಪರಿಣಿತ ಗ್ರಾಹಕ ಸೇವಕರ ತಂಡ, ದೇಶದ ಪ್ರತಿಷ್ಠಿತ ಕಂಪೆನಿಗಳ ವಸ್ತ್ರಗಳು, ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಎಲ್ಲಾ ವಯಸ್ಸಿನವರಿಗೆ ಬೇಕಾದ ನವೀನ ಬಟ್ಟೆಗಳ ಅಪೂರ್ವ ಸಂಗ್ರಹದ ಪರಿಪೂರ್ಣ ಮಳಿಗೆ ಇದಾಗಿದೆ. ಮದುವೆ ಜವುಳಿ ಸಹಿತ ಕಾಂಜೀವರಂ, ಬನಾರಸ್, ಧರ್ಮಾ ವರಂ, ಕಾಟನ್ ಸಾರಿ, ಕಾಟನ್ ಸಿಲ್ಕ್ ಕೋಲ್ಕತಾ ಕಾಟನ್, ಬಾಂಗ್ಲಾ ಕಾಟನ್, ಫ್ಯಾನ್ಸಿ ಡಿಸೈನರ್ ಸಾರೀಸ್, ಬೈಡಲ್ ಲೆಹಂಗಾ, ಲಾಂಗ್ ಟಾಪ್, ಚೂಡಿದಾರ್, ಕುರ್ತೀಸ್, ಮಕ್ಕಳ ಉಡುಪುಗಳು, ಮೆನ್ಸ್‍ವೇರ್, ಹ್ಯಾಂಡ್ ಲೂಮ್ಸ್ ಬ್ಯಾಂಡೆಡ್ ಡಿಸೈನ್ ಸಾರಿ ಸಹಿತ ನಾನಾ ಕಂಪೆನಿಗಳ ವಿವಿಧ ವಿನ್ಯಾಸದ ಉಡುಪುಗಳ ಸಂಗ್ರಹದೊಂದಿಗೆ ಆಕರ್ಷಕ ಬೆಲೆಯಲ್ಲಿ ನಿಮ್ಮಿಷ್ಟದ ವಿನ್ಯಾಸದ ಉಡುಗೆ ನಿಮ್ಮದಾಗಿಸಿಕೊಳ್ಳುವ ಅವಕಾಶ ಸಿಗುತ್ತಿದೆ.
ಇನ್ನು ಇಲ್ಲಿ ಬರುವ ಗ್ರಾಹಕರ ಅನುಕೂಲಕ್ಕಾಗಿ ವ್ಯವಸ್ಥಿತವಾದ 300 ಕ್ಕೂ ಹೆಚ್ಚು ವಾಹನ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗ್ರಾಹಕರಿಗೆ ಉಚಿತ ವೈಫೈ ಸೌಲಭ್ಯವೂ ಇದೆ. ಇನ್ನು ಮುಂದೆ ಬ್ರಹ್ಮಾವರದ ಜನತೆ ತಮ್ಮ ಶುಭಾ ಸಮಾರ0ಭಗಳಿಗೆ ಬೇಕಾದ ಎಲ್ಲಾ ಬಗೆಯ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಬಟ್ಟೆಗಳನ್ನು ಸತ್ಯನಾಥ ಸ್ಟೋರ್‍ನಲ್ಲಿ ಒಂದೇ ಸೂರಿನಡಿಯಲ್ಲಿ ಪಡೆಯಬಹುದಾಗಿದೆ.
1949ರಲ್ಲಿ ಆರಂಭಗೊಂಡ ಈ ಸಂಸ್ಥೆಯು ಏಳು ದಶಕಗಳ ಕಾಲ ಜವುಳಿ ಕ್ಷೇತ್ರದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ಮನೆಮತಾಗಿದೆ. ಈಗಾಗಲೇ ಕರಾವಳಿ, ಮಲೆನಾಡಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿರುವ ಸಂಸ್ಥೆಯು ತೀರ್ಥಹಳ್ಳಿ, ಕೊಪ್ಪದಲ್ಲಿ ತನ್ನ ಶಾಖೆಯನ್ನು ಹೊಂದಿದೆ.
ಈ ಶುಭ ಸಮಾರಂಭದಲ್ಲಿ ಸರಿಗಮಪ ಖ್ಯಾತಿಯ ವೈಷ್ಣವಿ ರವಿ, ಡಾ. ಅಭಿಷೇಕ್, ಮೈತ್ರಿ ಅಯ್ಯರ್, ಎದೆ ತುಂಬಿ ಹಾಡುವೆನು ಖ್ಯಾತಿಯ ವಿದ್ವಾನ್ ಯಶ್‍ವಂತ್ ಅವರಿಂದ ಸಂಜೆ 6.30ರಿಂದ ‘ಸತ್ಯನಾಥ ಗಾನ ವೈಭವ’ ಕಾರ್ಯಕ್ರಮ ನಡೆಯಲಿದೆ.