ದುಬೈ: ಗರ್ಭಿಣಿ ಕೋವಿಡ್’ಗೆ ಬಲಿ
ದುಬೈ: ಚಿಕ್ಕಮಗಳೂರು ಕಳಸದ ಏಳು ತಿಂಗಳ ಗರ್ಭಿಣಿಯೊಬ್ಬರು ದುಬೈನಲ್ಲಿ ಇಂದು ಕೋವಿಡ್ ಸೋಂಕು ಹಾಗೂ ನ್ಯುಮೋನಿಯಾಗೆ ಬಲಿಯಾಗಿದ್ದಾರೆ.
ಶ್ರೇಯಾ ರೈ (ಸೌಮ್ಯ ರೈ) ಮೃತಪಟ್ಟ ಮಹಿಳೆ. ಇವರು ದುಬೈನಲ್ಲಿ ವಾಸವಿದ್ದು, ಇವರಿಗೆ ಕೆಲ ದಿನಗಳ ಹಿಂದೆಯಷ್ಟೇ ಕೊರೊನಾ ಸೋಂಕು ದೃಢಪಟ್ಟಿತ್ತು. ಆದ ಕಾರಣ ಅವರನ್ನು ದುಬೈಯ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಅವರ ಆರೋಗ್ಯ ದಿನ ಕಳೆದಂತೆ ಬಿಗಡಾಯಿಸಿದ್ದು, ಇಂದು ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೂಲತಃ ಚಿಕ್ಕಮಗಳೂರು ಕಳಸದವರಾಗಿದ್ದ ಶ್ರೇಯಾ, ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಪೂರೈಸಿದ್ದರು. ಬಳಿಕ ಪಡುಬಿದ್ರಿಯ ಪವನ್ ಶೆಟ್ಟಿ ಎಂಬವರ ಜೊತೆ ವಿವಾಹವಾಗಿ ದುಬೈಯಲ್ಲಿ ನೆಲೆಸಿದ್ದರು ಎಂದು ತಿಳಿದು ಬಂದಿದೆ.