ಮಣಿಪಾಲ: ಕಂದಕಕ್ಕೆ ಇಳಿದ ಕಾರು 5 ದ್ವಿಚಕ್ರ ವಾಹನ ಜಖಂ
ಉಡುಪಿ: ನಿಯಂತ್ರಣ ತಪ್ಪಿದ ಕಾರೊಂದು ಕಂದಕಕ್ಕೆ ಉರುಳಿದ ಘಟನೆ ಉಡುಪಿಯ ಲಕ್ಷ್ಮಿಂದ್ರ ನಗರದ ಬಳಿ ನಡೆದಿದೆ.
ಉಡುಪಿಯಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಕಾರು, ಲಕ್ಷ್ಮಿಂದ್ರ ನಗರದ ಬಳಿ ನಿಯಂತ್ರಣ ತಪ್ಪಿ ಕಂದಕಕ್ಕೆ ಇಳಿದಿದೆ. ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿಹೊಡೆದಿದ್ದು ಬೈಕ್‍ಗಳು ನಜ್ಜುಗುಜ್ಜಾಗಿದೆ. ಅಲ್ಲದೆ 5 ದ್ವಿಚಕ್ರ ವಾಹನಗಳು ಕಾರಿನ ಜೊತೆಗೆ ತೋಡಿಗೆ ಬಿದ್ದಿದೆ.
ಕೆಳಭಾಗದಲ್ಲಿ ಮರವಿದ್ದ ಕಾರಣ ಕಾರು ಸಂಪುರ್ಣವಾಗಿ ಕಂದಕಕ್ಕೆ ಉರುಳದೆ ನಿಂತಿದೆ. ಅದೃಷ್ಟವಶಾತ್ ಕಾರು ಚಲಾಯಿಸುತ್ತಿದ್ದವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.