ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್!
ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಆದರೆ ಈ ಬಾರಿ ಶಾಕ್ ನೀಡುತ್ತಿರುವುದು ಸರಕಾರ ಅಲ್ಲ ಬದಲಾಗಿ ಅಂಚೆ ಬ್ಯಾಂಕ್ಗಳು.
ಹೌದು ಇನ್ನು ಮುಂದೆ ಅಂಚೆ ಬ್ಯಾಂಕ್ನಲ್ಲಿ ಹಣ ಠೇವಣಿ ಇಡಲು ಮತ್ತು ಹಿಂಪಡೆಯಲು ಇಂಡಿಯಾ ಪೋಸ್ಟ್ ಬ್ಯಾಂಕ್ ಗ್ರಾಹಕರ ಮೇಲೆ ಶುಲ್ಕ ವಿಧಿಸಲು ಮುಂದಾಗಿದೆ.
ಅಲ್ಲದೆ ಈ ಬಗ್ಗೆ ಹೊಸ ಸುತ್ತೋಲೆಯನ್ನು ಬ್ಯಾಂಕ್ ಹೊರಡಿಸಿದೆ. ಈ ಕುರಿತಾಗಿ ನೆರೆಯ ಕೇರಳ ರಾಜ್ಯದ ಮಾಧ್ಯಮವೊಂದು ವರದಿ ಮಾಡಿದೆ ಈ ವರದಿ ಪ್ರಕಾರ, ಕೇರಳ ಅಂಚೆ ಬ್ಯಾಂಕ್ ಗಳ ಮೂಲಗಳಿಂದ ಇಂತಹದ್ದೊಂದು ಮಾಹಿತಿ ಹೊರ ಬಂದಿದೆ ಎಂದು ಹೇಳಲಾಗಿದೆ. ಈ ಹೊಸ ನಿಯಮ ಎಪ್ರಿಲ್ 1 ರಿಂದ ಜಾರಿಯಾಗಲಿದ್ದು, ಆ ಪ್ರಕಾರ ಮೂಲ ಉಳಿತಾಯ ಖಾತೆಗಳಿಂದ ಗ್ರಾಹಕರು ನಾಲ್ಕು ಬಾರಿ ಹಣವನ್ನು ಹಿಂಪಡೆಯಬಹುದು. ಅದಕ್ಕಿಂತಲೂ ಹೆಚ್ಚು ಬಾರಿ ಹಣ ಡ್ರಾ ಮಾಡಿದರೆ, ಗ್ರಾಹಕರಿಗೆ ಪ್ರತಿ ವಹಿವಾಟಿಗೆ 25 ರೂ. ಗ್ರಾಹಕರ ಖಾತೆಗಳಿಂದ ಬ್ಯಾಂಕ್ ವಸೂಲಿ ಮಾಡಿಕೊಳ್ಳುತ್ತದೆ.
ಅಲ್ಲದೆ, ಕ್ಯಾಶ್ ವಿತ್ ಡ್ರಾ ಮತ್ತು ಕ್ಯಾಶ್ ಡಿಪಾಸಿಟ್ ಮತ್ತು ಪ್ರತಿ ಟ್ರಾನ್ಸಾಕ್ಷನ್ ಗಳ ಮೇಲೆ ಬ್ಯಾಂಕ್ ಶುಲ್ಕ ವಿಧಿಸಲಿದೆ. ಇನ್ನೂ ಆಧಾರ್ ಆಧಾರಿತ ಬ್ಯಾಂಕ್ ವಹಿವಾಟುಗಳಿಗೆ ಕೂಡ ಹಣಪಾವತಿಸಬೇಕಾಗಿದ್ದು, ಈ ವಹಿವಾಟುಗಳಿಗೆ ಗ್ರಾಹಕರು 20 ರೂ. ಹಣ ಪಾವತಿಸಬೇಕು. ಮಿನಿಸ್ಟೇಟ್ಮೆಂಟ್ಗ ಳನ್ನು ಪಡೆಯುವುದಿದ್ದರೂ ಗ್ರಾಹಕರು ಹಣ ಪಾವತಿ ಮಾಡಬೇಕು. ಎಲ್ಲ ಶುಲ್ಕಗಳಿಗೂ ಜಿಎಸ್ ಟಿ ಕೂಡ ಹಾಕಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಈ ಮೂಲಕ ಬ್ಯಾಂಕ್ ನಲ್ಲಿ ಖಾತೆ ಇರುವ ಗ್ರಾಹಕರು ಅಪಾರ ಪ್ರಮಾಣದಲ್ಲಿ ಹಣ ಕಳೆದು ಕೊಳ್ಳುವುದು ಖಚಿತ ಎಂದೇ ಹೇಳಲಾಗುತ್ತಿವೆ.