ಅಲೆವೂರು: ವ್ಯಕ್ತಿಯೋರ್ವರ ಅಸ್ತಿಪಂಜರ ಪತ್ತೆ

ಅಲೆವೂರು ಜೋಡುರಸ್ತೆ ಬಳಿಯ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರ ಅಸ್ತಿ ಪಂಜರ ಇoದು ಪತ್ತೆಯಾಗಿದೆ. ಮೃತರನ್ನು ಸ್ಥಳೀಯ ದಿ. ಲಚ್ಚು ಶೆಟ್ಟಿ ಅವರ ಮಗ ಸುರೇಶ ಶೆಟ್ಟಿ(47) ಎಂದು ಗುರುತಿಸಲಾಗಿದೆ.

ಇವರು ಮುಂಬೈ ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದು, ಏಳೆಂಟು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಕೌಟುಂಬಿಕ ಕಲಹದಿಂದಾಗಿ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಇವರು, ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದರು.

ಇಂದು ಸ್ಥಳೀಯರು ಗೇರು ಬೀಜ ಸಂಗ್ರಹಿಸಲು ತೆರಳಿದ ವೇಳೆ ಮನೆಯಲ್ಲಿ ಅಸ್ತಿಪಂಜರ ಪತ್ತೆಯಾಗಿದೆ. ಸುರೇಶ್ ಶೆಟ್ಟಿ ಅವರು ಆತ್ಮಹತ್ಯೆ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ಸ್ಥಳೀಯರು ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕಳೇಬರ ಶವಪರೀಕ್ಷೆಗೆ ಮಣಿಪಾಲದ ಶವಗಾರಕ್ಕೆ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!