| ಉಡುಪಿ: ಪವರ್ ಸಂಸ್ಥೆ ವತಿಯಿಂದ ಮಹಿಳಾ ದಿನಾಚರಣೆಯಂದು ಪ್ರತಿ ವರ್ಷ ಆಚರಿಸಲ್ಪಡುವ ಚಾರ್ಟರ್ ಡೇ ಯನ್ನು ಈ ಬಾರಿ ಮಾಚ್ 6 ರಂದು ಮಧ್ಯಾಹ್ನ 4 ಗಂಟೆಗೆ ಮಣಿಪಾಲದ ಸೆಂಟ್ರಲ್ ಪಾರ್ಕ್ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗದೆ ಎಂದು ಪವರ್ ಸಂಸ್ಥೆಯ ಸದಸ್ಯೆ ಪುಷ್ಪಾ ಜಿ. ರಾವ್ ಹೇಳಿದ್ದಾರೆ.
ಈ ಕುರಿತು ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಈ ವರ್ಷ ಬೆಂಗಳೂರಿನ ಉಬುಂಟು ಕನ್ಸೊರ್ಷಿಯಮ್ ಮಹಿಳಾ ಉದ್ಯಮಿಗಳ ಸಂಘ ದೊಂದಿಗೆ ಜಂಟಿಯಾಗಿ ಈ ಕಾರ್ಯಕ್ರಮ ನಡೆಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಉಡುಪಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿ.ಡಿ.ಪಿ.ಓ. ವೀಣಾ ವಿವೇಕಾನಂದ, ಉಬುಂಟು ಇದರ ಸ್ಥಾಪಕರು ಹಾಗೂ ಜೊತೆಕಾರ್ಯದರ್ಶಿ ದೇವಕಿ ಯೋಗಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ವೇಳೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಾಧಕಿಯರಾದ ಕಲ್ಪ ಟ್ರಸ್ಟ್ ನ ಸ್ಥಾಪಕರಾದ ಪ್ರಮೀಳ ರಾವ್ ಮತ್ತು ಅನಿಮಲ್ ಕೇರ್ ಟ್ರಸ್ಟ್ ನ ಗೌರವ ಟ್ರಸ್ಟಿ ಸುಮಾ ನಾಯಕ್ ಅವರನ್ನು ಅಭಿನಂದಿಸಲಾಗುವುದು ಎಂದರು.
ಇದೇ ಕಾರ್ಯಕ್ರಮದಲ್ಲಿ ಪವರ್ ಸಂಸ್ಥೆಯ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳಾದ ಆಯ್ಕೆಯಾದ ಅಧ್ಯಕ್ಷೆ ತಾರಾ ತಿಮ್ಮಯ್ಯ, ಉಪಾಧ್ಯಕ್ಷರಾದ ಸುಗುಣಾ ಸುವರ್ಣ, ಸುವರ್ಷ ಮಿನ್ಜ್, ಕಾರ್ಯದರ್ಶಿ ಪ್ರಿಯಾ ಕಾಮತ್, ಕೋಶಾಧಿಕಾರಿ ಶಾಲಿನಿ ಡಿ. ಬಂಗೇರಾ ಮತ್ತು ಜೊತೆ ಕಾರ್ಯದರ್ಶಿ ಪಲ್ಲವಿ ಬೆಹೆರ ನೂತನ ಪದಾಧಿಕಾರಿಗಳಾಗಿ ಪದಗ್ರಹಣ ಮಾಡಲಿದ್ದಾರೆ.
ಈ ಸಂದರ್ಬ ಪವರ್ ಸಂಸ್ಥೆಯ ಸದಸ್ಯರಾದ ತಾರಾ ತಿಮ್ಮಯ್ಯ, ಸುಗುಣಾ ಸುವರ್ಣ, ಸುವರ್ಷ ಮಿನ್ಜ್ ಉಪಸ್ಥಿತರಿದ್ದರು.
| |