ಮನೆಯ ಮುಂಭಾಗ ನಿಲ್ಲಿಸಿದ್ದ 2 ಕಾರುಗಳಿಗೆ ಕಲ್ಲು ಎಸೆದು ಹಾನಿ

ಮಂಗಳೂರು: ಮನೆಯ ಮುಂಭಾಗ ನಿಲ್ಲಿಸಿದ್ದ ಎರಡು ಕಾರುಗಳಿಗೆ ದುಷ್ಕರ್ಮಿಗಳು ಕಲ್ಲು ಎಸೆದು ಹಾನಿಗೊಳಿಸಿರುವ ಘಟನೆ ಕೊಣಾಜೆಯ ಜಲ್ಲಿಕ್ರಾಸ್ ಎಂಬಲ್ಲಿ ಫೆ.3 ರ ತಡರಾತ್ರಿ ನಡೆದಿದೆ.

ಜಲ್ಲಿಕ್ರಾಸ್ ನಿವಾಸಿ ಅಬ್ಬಾಸ್ ಅವರ ಮನೆಯಂಗಳದಲ್ಲಿದ್ದ ಕಾರುಗಳ ಗಾಜುಗಳಿಗೆ ದುಷ್ಕರ್ಮಿಗಳು ಕಲ್ಲು ಎಸೆದು ಹಾನಿ ಗೆಡವಿದ್ದಾರೆ. ಅಲ್ಲದೆ ಘಟನೆಯಲ್ಲಿ ಮನೆಯ ಕಿಟಕಿಯ ಗಾಜುಗಳಿಗೂ ಹಾನಿಯಾಗಿದೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕೊಣಾಜೆ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!