ಗ್ರಾಹಕರಿಗೆ ಆಘಾತ: ಸತತ 6ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ
ನವದೆಹಲಿ: ಸತತ 6ನೇ ದಿನವಾದ ಶುಕ್ರವಾರ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದ್ದು, ಈ ಬೆಳವಣಿಗೆ ಗ್ರಾಹಕರಿಗೆ ಆಘಾತವನ್ನು ತಂದಿದೆ.
ಪೆಟ್ರೋಲ್ ದರದಲ್ಲಿ 57 ಪೈಸೆ ಹಾಗೂ ಡೀಸೆಲ್ ದರದಲ್ಲಿ 59 ಪೈಸೆ ಏರಿಕೆ ಮಾಡಲಾಗಿದ್ದು, ಇದರಿಂದಾಗಿ 6 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಕ್ರಮವಾಗಿ ರೂ.3.31 ಹಾಗೂ ರೂ.3.42 ಏರಿಕೆಯಾದಂತಾಗಿದೆ.
ಇದರೊಂದಿಗೆ ಉದ್ಯಾನನಗರಿ ಬೆಂಗಳೂರಿನಲ್ಲಿ ಲೀ. ಪೆಟ್ರೋಲ್ ದರವು, 76.98 ಹಾಗೂ ಡೀಸೆಲ್ ದರವು ರೂ. 69.22ಕ್ಕೆ ಜಿಗಿದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಂಪನಿಗಳು ಈ ಹೆಚ್ಚಳ ಮಾಡುತ್ತಿವೆ. ಇದು ಮತ್ತೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.