ದೆಹಲಿ ಸ್ಥಳೀಯ ಸಂಸ್ಥೆ ಉಪ ಚುನಾವಣೆ ಫಲಿತಾಂಶ 2022ರ ಚುನಾವಣೆಯ ದಿಕ್ಸೂಚಿ: ಮನೀಶ್ ಸಿಸೋಡಿಯಾ
ನವದೆಹಲಿ: ದೆಹಲಿ ಪುರಸಭೆ ಉಪ ಚುನಾವಣಾ ಫಲಿತಾಂಶ ಮುಂಬರುವ 2022ರ ದೆಹಲಿ ಪಾಲಿಕೆ ಚುನಾವಣೆಯ ದಿಕ್ಸೂಚಿ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಹಾಗೂ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿ ಪಾಲಿಕೆಯ ಐದು ವಾರ್ಡ್ಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ನಾಲ್ಕು ಸ್ಥಾನಗಳಲ್ಲಿ ಜಯಭೇರಿ ಭಾರಿಸಿದೆ. ಇದು ಆಪ್ ನಾಯಕರ ಸಂತಸಕ್ಕೆ ಕಾರಣವಾಗಿದ್ದು, ಪಕ್ಷದ ಕಾರ್ಯಕರ್ತರಿಗೆ ಸಿಹಿ ತಿನ್ನಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಹಾಗೂ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ದೆಹಲಿ ಜನರು ತಮ್ಮ ಸರ್ಕಾರದ ಬಗ್ಗೆ ನಂಬಿಕೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಬಗ್ಗೆ ಅವರು ವ್ಯಗ್ರಗೊಂಡಿರುವುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. 2022ರ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಆಪ್ ಹೊರತು ಪಡಿಸಿದರೆ, ಬಿಜೆಪಿ ಇಲ್ಲಿ ಶೂನ್ಯ ಸಂಪಾದನೆ ಮಾಡಿದ್ದು, ಒಂದು ಸ್ಥಾನವು ಕಾಂಗ್ರೆಸ್ ಪಾಲಾಗಿದೆ. ಎಎಪಿ ಪಕ್ಷ ಕಲ್ಯಾಣಪುರಿ, ಶಾಲಿಮಾರ್ ಬಾಗ್, ರೋಹಿಣಿ-ಸಿ ಮತ್ತು ತ್ರಿಲೋಕಪುರಿ ವಾರ್ಡ್ಗಳನ್ನ ಗೆದ್ದಿದ್ದರೆ, ಕಾಂಗ್ರೆಸ್ ಪಕ್ಷ ಚೌಹಾಣ್ ಬಂಗೇರ್ ವಾರ್ಡ್ ಅನ್ನು ಜಯಿಸಿದೆ.