ಮಹಾರಾಷ್ಟ್ರ: ಕೊರೋನಾ ಗೆದ್ದ 1,233 ಪೊಲೀಸರು
ಮುಂಬೈ: ದೇಶವನ್ನೇ ಮಹಾಮಾರಿ ಕೊರೋನಾ ಬೆಂಬಿದಡೆ ಕಾಡುತ್ತಿದೆ. ಇದರ ಮಧ್ಯೆ ಕೊರೋನಾ ವಾರಿಯರ್ಸ್ ಆಗಿದ್ದ ಪೊಲೀಸರಿಗೂ ಕೊರೋನಾ ಮಹಾಮಾರಿಗೆ ತುತ್ತಿಗಿದ್ದರು. ಈ ಪೈಕಿ 1,233 ಮಂದಿ ಪೊಲೀಸರು ಗುಣಮುಖರಾಗಿದ್ದು 334 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
197 ಪೊಲೀಸ್ ಅಧಿಕಾರಿಗಳು, 1,211 ಸಿಬ್ಬಂದಿಗೆ ಕೊರೋನಾ ಸೋಂಕು ಹರಡಿತ್ತು. ಈ ಪೈಕಿ 1,233 ಮಂದಿ ಇದೀಗ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ತಿಳಿಸಿದ್ದಾರೆ.
ಒಟ್ಟಾರೆ 1,233 ಪೊಲೀಸರು ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಈ ಪೈಕಿ 334 ಮಂದಿ ಕರ್ತವ್ಯಕ್ಕೆ ಹಾಜರಾಗಿರುವುದು ಕೊರೋನಾ ವಿರುದ್ಧದ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ ಕೊರೋನಾ ಹಬ್ಬರಿಸುತ್ತಿದ್ದು ಭಾರತದಲ್ಲೇ ಅತೀ ಹೆಚ್ಚು ಸೋಂಕು ಹಾಗೂ ಸಾವಿನ ರಾಜ್ಯವಾಗಿದೆ. ಇನ್ನು ಇಲ್ಲಿ ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ ಪರೀಕ್ಷೆಗಾಗಿ 4,500 ರೂಪಾಯಿ ವಸೂಲಿ ಮಾಡಲಾಗುತ್ತಿತ್ತು. ಜನರಿಂದ ಸುಲಿಗೆ ಮಾಡುತ್ತಿದ್ದರಿಂದ ಕೋವಿಡ್ ಟೆಸ್ಟ್ ಅನ್ನು 4,500ರಿಂದ 2,200 ರುಪಾಯಿಗೆ ಇಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.