ಕಡಬ: ಪ್ರೀತಿಗೆ ಮನೆಯವರ ವಿರೋಧ – ಯುವತಿ ಆತ್ಮಹತ್ಯೆ
ಕಡಬ: ನೇಣು ಬಿಗಿದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲ್ಲೂಕಿನ ಪುತ್ತಿಲ ಬರೆತ್ತಾಡಿ ಎಂಬಲ್ಲಿ ನಡೆದಿದೆ. ಬರೆತ್ತಾಡಿಯ ರಮ್ಯಾ (23) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಯುವತಿ, ಮಹೇಶ್ನನ್ನು ಪ್ರೀತಿಸುತ್ತಿದ್ದು, ಆಕೆಯ ಮನೆಯವರು ಅದನ್ನು ವಿರೋಧಿಸಿದ್ದರು, ಈ ವಿಷಯವಾಗಿ ಮನನೊಂದ ಯುವತಿ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿಯ ತಾಯಿ ಹುಲ್ಲು ತರಲು ಹೋಗಿದ್ದು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ತಂದೆ ಕೊರಗಪ್ಪ ಅವರು ನೀಡಿದ ದೂರಿನ ಆಧಾರದ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ