ಉದ್ಯಾವರ: ಕಾರ್ಮಿಕರಿಗೆ ಅಕ್ಕಿ ವಿತರಣೆ
ಉಡುಪಿ : ಉದ್ಯಾವರ ಪಿತ್ರೋಡಿಯ ಹಿಂದೂಸ್ಥಾನ್ ಮೆರೈನ್ ಕಂಪೆನಿಯ ಮೀನು ಕಟ್ಟಿಂಗ್ ಕಟ್ಟಡದಲ್ಲಿ ದುಡಿಯುವ ಎಲ್ಲಾ ಮೀನು ಕಟ್ಟಿಂಗ್ ಮಹಿಳೆಯರಿಗೆ ತಲಾ ಹತ್ತು ಕೆ.ಜಿ.ಯಂತೆ ಹಿಂದೂಸ್ಥಾನ್ ಮೆರೈನ್ ಕಂಪೆನಿಯ ಮಾಲಕ ಎಂ. ಕೆ. ಬಾಲ್ ರಾಜ್ ರವರು ಅಕ್ಕಿ ವಿತರಣೆ ಮಾಡಿದರು.
ಮೀನು ಕಟ್ಟಿಂಗ್ ಮಾಡುವ ಮಹಿಳೆಯರಿಗೆ ಧರ್ಮಾರ್ಥವಾಗಿ ಕಟ್ಟಡವನ್ನು ಬಾಡಿಗೆ ರಹಿತವಾಗಿ ನೀಡಿರುವ ಎಂಕೆ ಬಾಲ್ ರಾಜ್, ಬಾಡಿಗೆಯ ಬದಲಾಗಿ ಮೀನು ಕಟ್ಟಿಂಗ್ ಮಾಡುವ ಮಹಿಳೆಯರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದರು. ಈ ಹಿನ್ನಲೆಯಲ್ಲಿ ಮೀನು ಕಟ್ಟಿಂಗ್ ಮಾಲಕ ಸಂತೋಷ್ ಕುಂದರ್ ಪ್ರತಿ ತಿಂಗಳ ಕೊನೆಯ ದಿನದಂದು ತಲಾ ಹತ್ತು ಕೆ.ಜಿ.ಯಂತೆ ಕುಚ್ಚಿಗೆ ಅಕ್ಕಿಯನ್ನು ಮಹಿಳೆಯರಿಗೆ ನೀಡಲು ನಿರ್ಧರಿಸಿದ್ದರು.
ಹಿಂದೂಸ್ಥಾನ್ ಮೆರೈನ್ ಕಂಪೆನಿಯ ಮಾಲಕ ಎಂ.ಕೆ ಬಾಲ್ ರಾಜ್ ರವರ ಮಾನವೀಯತೆಗೆ ಕಟ್ಟಿಂಗ್ ಶೆಡ್ ಮಾಲಕ ಸಂತೋಷ್ ಕುಂದರ್ ಮತ್ತು 60 ಮಹಿಳೆಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.