ಧರ್ಮಸ್ಥಳ: ನೆರಿಯಾ ಗ್ರಾಮದ 23 ವರ್ಷದ ಯುವತಿ ನಾಪತ್ತೆ
ಬೆಳ್ತಂಗಡಿ, ಮಾ.1: ಬೆಳ್ತಂಗಡಿ ತಾಲೂಕಿನ ಕೋಲೋಡಿ ಮನೆ ನೆರಿಯಾ ಗ್ರಾಮದ ಕುಮಾರಿ ತೇಜಸ್ವಿನಿ (23) ಫೆ. 22 ರಂದು ಕಾಣೆಯಾಗಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಣೆಯಾದ ಯುವತಿ ಸಾಧಾರಣ ಶರೀರ, ಗೋಧಿ ಮೈ ಬಣ್ಣ ಹೊಂದಿದ್ದು, ಕನ್ನಡ ತುಳು ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನದಂದು ಕಪ್ಪು ಬಣ್ಣದ ಟಾಪ್, ಕಪ್ಪು-ಬಿಳಿ ಮಿಶ್ರಿತ ಪ್ಯಾಂಟ್ ಧರಿಸಿರುತ್ತಾರೆ. ಈ ಚಹರೆಯುಳ್ಳ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಧರ್ಮಸ್ಥಳ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.