ಪಡುಬಿದ್ರೆ ಬ್ಲೂ ಪ್ಲಾಗ್ ಬೀಚ್ ಬಳಿ ವಾಟರ್ ಸ್ಪೋಟ್ಸ್: ಸಚಿವ ಸಿ.ಪಿ ಯೋಗೇಶ್ವರ್

ಉಡುಪಿ: ಪಡುಬಿದ್ರೆಯ ಬ್ಲೂ ಪ್ಲಾಗ್ ಬೀಚ್‍ಗೆ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಅವರು ಇಂದು ಭೇಟಿ ನೀಡಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮದ ದೃಷ್ಟಿಯಿಂದ ಪಡುಬಿದ್ರೆ ಬೀಚ್ ಗೆ ಬ್ಲೂ ಫ್ಲಾಗ್ ಬೀಚ್ ಮಾನ್ಯತೆ ಸಿಕ್ಕಿದೆ. ಒಟ್ಟು ನಾಲ್ಕು ಬೀಚ್‍ಗಳಿಗೆ ಈ ಮಾನ್ಯತೆ ಸಿಕ್ಕಿದ್ದು, ಪೈಕಿ ಕರ್ನಾಟಕದ 2 ಬೀಚ್ ಗಳಲ್ಲಿ ಪಡುಬಿದ್ರೆ ಬೀಚ್ ಕೂಡಾ ಒಂದು. ಈ ಹಿನ್ನೆಲೆಯಲ್ಲಿ ಈ ಬೀಚ್‍ನ್ನು  ಪ್ರಮುಖ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಮಾಡಬೇಕಾದದ್ದು ನಮ್ಮ ಕರ್ತವ್ಯ ಹಾಗೂ ಸರಕಾರದ ಹೊಣೆಗಾರಿಕೆಯಾಗಿದೆ. ಆ ದೃಷ್ಟಿಯಿಂದ ಇಲ್ಲಿ ಬರುವ ಪ್ರವಾಸಿಗರಿಕೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈ ಭಾಗದಲ್ಲಿ ಟೂರಿಸಂನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಸಮುದ್ರಕ್ಕೆ ಹೊಂದಿರುವ ಸರಕಾರಿ ಜಾಗವನ್ನು ಕಂದಾಯ ಇಲಾಖೆಯಿಂದ ಪ್ರವಾಸೋಧ್ಯಮದ ಇಲಾಖೆಗೆ ಪಡೆದುಕೊಂಡು, ಇಲ್ಲಿ ಮನರಂಜನಾ ದೃಷ್ಟಿಯಿಂದ ಯಾರಾದರು ಖಾಸಗಿಯವರು ವಾಟರ್ ಸ್ಪೋಟ್ಸ್ ಮಾಡಲು ಮುಂದೆ ಬಂದಲ್ಲಿ ಅವರಿಗೆ ಗುತ್ತಿದೆ ಆಧಾರದಲ್ಲಿ ಸರಕಾರದ ಮೂಲಕ ಜಿಲ್ಲಾಧಿಕಾರಿಯವರು  ಟೆಂಡರ್ ಮಾಡಿ ನೀಡಲಾಗುತ್ತದೆ. ಇಲ್ಲಿ ವಿಫುಲ ಅವಕಾಶಗಳಿಗಿದ್ದು ವಾಟರ್ ಸ್ಪೋಟ್ಸ್ ಅಭಿವೃದ್ಧಿ ದೃಷ್ಟಿಯಿಂದ ಇದಕ್ಕೆ ಪ್ರೋತ್ಸಾಹ ನೀಡುತ್ತೇವೆ ಎಂದರು. ಇನ್ನು ಈ ಭಾಗದಲ್ಲಿ ಮೂಲ ಭೂತ ಸೌರ್ಕಗಳನ್ನು ಒದಗಿಸಲು ನೀಡಿರುವ ಪ್ರಸ್ತಾವನೆಯನ್ನು ಪರಿಶೀಲನೆ ಮಾಡಿ, ಅವುಗಳನ್ನು ಪೂರೈಸಲಾಗುತ್ತದೆ. ಅಲ್ಲದೆ ಈ ಭಾಗದಲ್ಲಿ ಸಂಚಾರ ಧಟ್ಟನೆಯಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ರಸ್ತೆ ಅಗಲೀಕರಣದ ಅಗತ್ಯತೆಯನ್ನು ಗಮನಿಸಿ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು.

ನಮ್ಮ ಕರ್ನಾಟಕದ ಕರಾವಳಿಯಲ್ಲಿ ಟೂರಿಸಂನ ಉದ್ಯಮ ಅಂತ ಅಭಿವೃದ್ಧಿ ಪಡಿಸಿಲ್ಲ ಎಂದ ಅವರು, ಕೇರಳ ಹಾಗೂ ಗೋವಾ ರಾಜ್ಯದ ಮಾದರಿಯಲ್ಲಿ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಯಾವುದೇ ಖಾಸಗಿಯವರು ಮುಂದೆ ಬಂದರೆ ಅವರಿಗೆ 2025 ಟೂರಿಸಂ ಪಾಲಿಸಿ ಪ್ರಕಾರ ರಿಯಾಯ್ತಿ ಹಾಗೂ ಪ್ರೋತ್ಸಾಹ ನೀಡುತ್ತೇವೆ ಹಾಗೂ ಪ್ರವಾಸೋಧ್ಯಮವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕರಾವಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ ಎಂದರು.

ಈ ಕುರಿತಾಗಿ ಮಾತು ಮುಂದುವರೆಸಿದ ಅವರು, ಸಾಗರ ಮಾಲ ಕಾರ್ಯಕ್ರಮದಲ್ಲಿ ಬಳಿ 320 ಕಿಮೀ ಕೋಸ್ಟಲ್ ಬೆಲ್ಟ್ ಗೆ ಸೀ ಪ್ಲಾನ್‍ ಅನುಮತಿ ಕುರಿತಂತೆ ಪ್ರಧಾನ ಮಂತ್ರಿ ಅವರ ಜೊತೆ ಮಾತುಕತೆ ನಡೆಸುತ್ತೇವೆ. ಪ್ರವಾಸಿಗರನ್ನು ಆಕರ್ಷಿಸುವುದಾಕ್ಕಾಗಿ ಹಾಗೂ ಈ ಭಾಗದಲ್ಲಿ ಹೆಲಿಟೂರಿಸಂನ್ನು ಅಭಿವೃದ್ಧಿ ಪಡಿಸುವ ಉದ್ದೇಶವನ್ನೂ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಸಾಧಕ ಬಾದಕಗಳನ್ನು ಪರಿಶೀಲನೆ ನಡೆಸಿ ಈ ಭಾಗದ ಟೂರಿಸಂನ್ನು ಅಭಿವೃದ್ಧಿ ಪಡಿಸಲು ಸರಕಾರ ಬದ್ಧವಗಿದೆ ಎಂದರು. ಈ ಸಂದರ್ಭ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾಧಿಕಾರಿ ಜಿ. ಜಗದೀಶ್, ಅದಾನಿ ಪವರ್ ಪ್ರಾಜೆಕ್ಟ್ ನ  ಸಿಇಓ ಕಿಶೋರ್ ಆಳ್ವ,  ಮೊದಲಾದವರು ಜೊತೆಗಿದ್ದರು. 

Leave a Reply

Your email address will not be published. Required fields are marked *

error: Content is protected !!