ಫೆ.26: ಒಂದೇ ದಿನ ಫಾಸ್ಟ್ ಟ್ಯಾಗ್ ನಲ್ಲಿ 104 ಕೋಟಿ ರೂ. ಸಂಗ್ರಹ!
ದೇಶದಾದ್ಯಂತ ವಾಹನಗಳಿಗೆ ಫಾಸ್ಟ್ ಟ್ಯಾಗ್ ನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಫಾಸ್ಟ್ ಟ್ಯಾಗ್ ಟೋಲ್ ಕಲೆಕ್ಷನ್ ನಿಂದ ಒಂದು ದಿನಕ್ಕೆ 104 ಕೋಟಿ ರೂ. ಸಂಗ್ರಹವಾಗಿದೆ ಎಂದು ವರದಿಯಾಗಿದೆ. ಫಾಸ್ಟ್ ಟ್ಯಾಗ್ ಮೂಲಕ ತನ್ನ ದೈನಂದಿನ ಟೋಲ್ ಸಂಗ್ರಹವು ಫೆ.26ಕ್ಕೆ ಸುಮಾರು 104 ಕೋಟಿ ರೂ. ತಲುಪಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಫೆಬ್ರವರಿ 16 ರಿಂದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಬಳಿಕ ಫಾಸ್ಟ್ ಟ್ಯಾಗ್ ಮೂಲಕ ಟೋಲ್ ಸಂಗ್ರಹವು ಸ್ಥಿರವಾದ ಬೆಳವಣಿಗೆಯನ್ನು ಕಂಡಿದ್ದು, ಟೋಲ್ ಸಂಗ್ರಹವು ಪ್ರತಿದಿನ 100 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ.ಈ ಮೂಲಕ ಫೆ.26 ರಂದು ಗರಿಷ್ಠ 104 ಕೋಟಿ ರೂ ಶುಲ್ಕ ಸಂಗ್ರಹವಾಗಿದೆ ಎಂದು ತಿಳಿಸಿದೆ.
ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಶೇಕಡಾ 20 ರಷ್ಟು ಮತ್ತು ಫಾಸ್ಟ್ ಟ್ಯಾಗ್ ಮೂಲಕ ಬಳಕೆದಾರರ ಶುಲ್ಕವನ್ನು ಸಂಗ್ರಹಿಸುವ ವಿಷಯದಲ್ಲಿ ಶೇಕಡಾ 27 ರಷ್ಟು ಬೆಳವಣಿಗೆಯನ್ನು ಕಂಡಿದೆ. ಕಳೆದ ಎರಡು ವಾರದಲ್ಲಿ 20 ಲಕ್ಷ ಹೊಸ ಫಾಸ್ಟ್ಟ್ಯಾಗ್ ಬಳಕೆದಾರರು ಸೇರಿದ್ದಾರೆ. ಒಟ್ಟಾರೆ ಫಾಸ್ಟ್ ಟ್ಯಾಗ್ ವಿತರಣೆಯ ಸಂಖ್ಯೆಯು 2.8 ಕೋಟಿ ರೂಪಾಯಿಗೆ ತಲುಪಿದೆ . ಇದರ ಜೊತೆಗೆ ಫಾಸ್ಟ್ ಟ್ಯಾಗ್ ಅನುಷ್ಠಾನವು ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು ಗಮನಾರ್ಹವಾಗಿ ಕಡಿಮೆಗೊಳಿಸಿದೆ, ಇದರ ಪರಿಣಾಮವಾಗಿ ಬಳಕೆದಾರರ ಅನುಭವ ಹೆಚ್ಚಾಗುತ್ತದೆ ಎಂದು ತಿಳಿಸಿದೆ.