ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರ ನಿಷೇಧ ಮಾ. 31ರವರೆಗೆ ವಿಸ್ತರಣೆ
ನವದೆಹಲಿ: ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರಕ್ಕೆ ಇದ್ದಂತಹ ನಿಷೇಧವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ದೇಶದಲ್ಲಿ ಕೊರೋನಾ ಪ್ರಮಾಣ ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರ ನಿಷೇಧವನ್ನು ಮಾರ್ಚ್ 31 ರವರೆಗೆ ವಿಸ್ತರಣೆ ಮಾಡಿದೆ.
ಈ ಹಿಂದೆ ಕಳೆದ ಮಾರ್ಚ್ 23ರಿಂದ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಸ್ಥಗಿಗೊಳಿಸಲಾಗಿತ್ತು. ಈ ಕುರಿತಂತೆ ಪರಿಷ್ಕøತ ಸುತ್ತೋಲೆಯನ್ನು ಹೊರಡಿಸಿರುವ ಡಿಜಿಸಿಎ, ವಿಮಾನ ಯಾನದ ನಿಷೇಧದ ಅವಧಿಯನ್ನು ವಿಸ್ತರಣೆ ಮಾಡಿದೆ.
ಈ ನಿಯಮ ಸರಕು ಸಾಗಣೆ ವಿಮಾನಗಳು ಹಾಗೂ ವಿಶೇಷ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದಿರುವ ಡಿಜಿಸಿಎ ನಿಗದಿತ ಅಂತರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಆಯ್ದ ಮಾರ್ಗಗಳಲ್ಲಿ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದೆ. ಭಾರತವು, ಫ್ರಾನ್ಸ್ ಸೇರಿದಂತೆ ಕೀನ್ಯಾ, ಬ್ರಿಟನ್, ಅಮೇರಿಕಾ, ಯುಎಇ, ಭೂತಾನ್ ಹಾಗೂ ಇಕರೆ ಕೆಲ ದೇಶಗಳೊಂದಿಗೆ ದ್ವಿಪಕ್ಷೀಯ ವೈಮಾನಿಕ ಒಪ್ಪಂದವನ್ನು ಮಾಡಿಕೊಂಡಿದ್ದು, ಈ ಒಪ್ಪಂದದ ಅಡಿಯಲ್ಲಿ ಆಯಾ ದೇಶಗಳಲ್ಲಿ ಆಯಾ ದೇಶಗಳ ವಿಮಾನಯಾನ ಕಂಪೆನಿಗಳಿಗೆ ವಿಶೇಷ ವಿಮಾನಗಳ ಸಂಚಾರಕ್ಕೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಆಯ್ದ ದೇಶಗಳಿಗೆ ದ್ವಿಪಕ್ಷೀಯ ವೈಮಾನಿಕ ಒಪ್ಪಂದದ ಆಧಾರದಲ್ಲಿ ಜುಲೈ ತಿಂಗಳಿನಿಂದ ವಿಶೇಷ ವಿಮಾನ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ.