ಓದುಗರೇ ಮುನ್ನಡೆಸಿದ “ಉಡುಪಿ ಟೈಮ್ಸ್” ಲೋಕಾರ್ಪಣೆಯಾಗಿ ವರುಷ
ನಿಮ್ಮ ನೆಚ್ಚಿನ ಉಡುಪಿ ಟೈಮ್ಸ್‌ಗೆ ಲೋರ್ಕಾಪಣೆಯಾಗಿ ಇಂದಿಗೆ ಒಂದು ವರುಷ, ಪಕ್ಷಾತೀತಾ ಹಾಗೂ ಯಾರ ಪ್ರಲೋಭೆಗೆ ಒಳಗಾಗದೇ ವಸ್ತುನಿಷ್ಠ ವರದಿನ್ನು ಬಿತ್ತರಿಸಿದ್ದೇವೆ. ಇದೇ ಕಾರಣದಿಂದ ಇಂದು ಪ್ರತಿನಿತ್ಯ ಐವತ್ತು ಸಾವಿರಕ್ಕೂ ಮಿಕ್ಕಿ ಓದುಗರು ನಮ್ಮ ವೆಬ್ ಸೈಟ್ ವೀಕ್ಷಿಸುತ್ತಾರೆ.
ಇಂದಿನ ವೇಗವಾದ, ತಂತ್ರಜ್ಞಾನ ಯುಗದಲ್ಲಿ ಸ್ಪಷ್ಟ ಹಾಗೂ ನಿಖರ ಸುದ್ದಿಗಳನ್ನು ಜನರಿಗೆ ತಲುಪಿಸಿದ ಪರಿಣಾಮ ಇಂದು “ಉಡುಪಿ ಟೈಮ್ಸ್” ಮಾಧ್ಯಮ ಕರಾವಳಿ ಕರ್ನಾಟಕ ಮಾತ್ರವಲ್ಲದೆ, ಮುಂಬೈ, ವಿದೇಶಗಳಲ್ಲೂ ಸಾವಿರಾರು ಓದುಗರನ್ನು ಪಡೆಯಲು ಸಾಧ್ಯವಾಯಿತು.
ಸುದ್ದಿಗಳನ್ನು ವೇಗವಾಗಿ ಓದುಗರಿಗೆ ತಲುಪಿಸುವುದು ಮಾತ್ರವಲ್ಲದೆ ಅದು ಸ್ಪಷ್ಟ ಹಾಗೂ ನಿಖರವಾಗಿ ಜನರಿಗೆ ತಲುಪಿಸಿದ ಪ್ರಯತ್ನಕ್ಕೆ ಓದುಗರು ನಮ್ಮ ವೆಬ್ ಸೈಟ್ ನೆಚ್ಚಿಕೊಳ್ಳುವಂತಾಯಿತು. ಸ್ಥಳೀಯ ವರದಿಗೆ ಮೊದಲ ಪ್ರಾಶಸ್ತ್ಯ, ರಾಜ್ಯ ಹಾಗು ರಾಷ್ಟ್ರೀಯ ಅಂತಾರಾಷ್ಟ್ರೀಯ ವರದಿಗಳು, ಓದುಗರನ್ನು ಹಿಡಿದಿಟ್ಟುಕೊಳ್ಳುವ ಲೇಖನಗಳು, ವಾರದ ವ್ಯಕ್ತಿ, ಶೆಫೀನ್ಸ್ ಟೈಮ್ಸ್ ಮೂಲಕ ಸುಲಭವಾಗಿ ಇಂಗ್ಲಿಷ್ ಕಲಿಯುವ ಅಂಕಣ, ಮಹಿಳೆಯರಿಗಾಗಿ ಹೊಸ ರುಚಿಯ ಟೈಮ್ಸ್ ಪಾಕಶಾಲೆ, ಭಗವದ್ಗೀತೆಯ ಅಧ್ಯಾಯಗಳು, ಹೀಗೆ ಅನೇಕ ವಿಚಾರಗಳನ್ನು ಹೊಂದಿರುವ “ಉಡುಪಿ ಟೈಮ್ಸ್” ನಿಮೆಲ್ಲರ ಪ್ರೀತಿಯಿಂದ ಒಂದು ವರುಷವನ್ನು ಕಳೆದಿದೆ, ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಓದುಗರನ್ನು ಪಡೆದ ಮೊದಲ ವೆಬ್ಸೈಟ್ ಎಂಬ ಹೆಗ್ಗಳಿಕೆ ಪಡೆದಿದೆ. ಇನ್ನಷ್ಟ್ಟು ಕನಸುಗಳನ್ನು ಹೊತ್ತಿರುವ “ಉಡುಪಿ ಟೈಮ್ಸ್” ಗೆ ನಿಮ್ಮೆಲ್ಲರ ಹಾರೈಕೆಯ ಇರಲಿ.
ಸಂಪಾದಕರು, ಉಡುಪಿ ಟೈಮ್ಸ್ ಹಾಗೂ ಆಡಳಿತ ಮಂಡಳಿ.
Congratulations.Keep going.Well done.Best wishes
Congratulation
Udupi Times is really doing a very good service to the Society with up to date and precise news. congratulate and wish you the very nedt.
Good luck for Udupi Times and the team.