ಜೈಲಿನಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಬ್ಲೇಡ್ ವಾರ್!
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಬ್ಲೇಡ್ ವಾರ್ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ವಿಚಾರಣಾಧೀನ ಕೈದಿಗಳ ನಡುವೆ ಹಲ್ಲೆ ನಡೆದಿದೆ ಘಟನೆಯಲ್ಲಿ. ಅಮರ ಅಲಿಯಾಸ್ ಪೆಪ್ಸಿ ಎಂಬ ಖೈದಿ ಗಾಯಗೊಂಡಿದ್ದಾನೆ. ಗಾಯಾಳು ಅಮರನಾಥ್ ಗೆ ಜೈಲು ಆಸ್ಪತ್ರೆಯಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಘಟನೆ ಸಂಬಂಧಿಸಿದಂತೆ ಸಯ್ಯದ್ ನಯಾಜ್ ಅಜ್ಮತ್, ಉಲ್ಲಾ ಸಯ್ಯದ್ ಸಮೀರ್, ರಿಯಾಜ್ ಇಮ್ರಾನ್ ವಿರುದ್ಧ ಅಗ್ರಹಾರ ಕಾರಾಗೃಹದ ಮುಖ್ಯ ಅಧೀಕ್ಷಕ ಶೇಷುಮೂರ್ತಿ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.
ವಿಚಾರಣಾಧೀನ ಕೊಠಡಿಗೆ ಬಂದ ಅಮರನಾಥ್ ಅಲಿಯಾಸ್ ಅಮರ್ ಎಂಬಾತನ ಜತೆ ಸಯ್ಯದ್ ಮತ್ತು ಸಹಚರರು ಜಗಳ ತೆಗೆದಿದ್ದಾರೆ. ಈ ವೇಳೆ ಜೈಲಿನಲ್ಲಿ ಸಯ್ಯದ್ ನ ಗುಂಡಾಗಿರಿ ಬಗ್ಗೆ ಅಮರನಾಥ್ ತಿರುಗಿ ಬಿದ್ದಿದ್ದಾನೆ. ಗಲಾಟೆ ನಡುವೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸಯ್ಯದ್ ಸಹಚರರು ಏಕಾಏಕಿ ಅಮರನಾಥ್ ಬ್ಲೇಡ್ ನಿಂದ ರಕ್ತ ಬರುವ ರೀತಿ ಹಲ್ಲೆ ಮಾಡಿದ್ದಾರೆ. ಕೂಡಲೇ ಜೈಲು ಸಿಬ್ಬಂದಿ ಎಲ್ಲರನ್ನು ವಶಕ್ಕೆ ಪಡೆದು ಅನಾಹುತ ತಪ್ಪಿಸಿದ್ದಾರೆ.