ಕುಂದಾಪುರ: ಇಂದು ತೆರೆ ಕಾಣಲಿದೆ ‘ಮಾರ್ಡನ್ ಮಹಾಭಾರತ’
ಕುಂದಾಪುರ: ಮಹಾಭಾರತದದ ಬಗ್ಗೆ ಸಿನೆಮಾ, ನಾಟಕ, ಕತೆಗಳಿಂದ ಕೇಳಿ ತಿಳಿದು ಕೊಂಡಿದ್ದೇವೆ. ಆದರೆ ಮಾರ್ಡನ್ ಮಹಾಭಾರತದ ಬಗ್ಗೆ ಯಾರಾದರೂ ಕೇಳಿದ್ದೀರಾ…? ಕೇಳಿಲ್ಲಾ ಅಂದ್ರೆ ಇಂದೇ ನಿಮ್ಮ ಸಮೀಪದ ಚಿತ್ರ ಮಂದಿರಕ್ಕೆ ಭೇಟಿ ಕೊಡಿ, ನಿಮ್ಮನ್ನ ರಂಜಿಸಲಿದೆ ಮಾರ್ಡನ್ ಮಹಾಭಾರತದ ಕತೆ
ಹೌದು… ಎಸ್.ವಿ.ಫಿಲ್ಮ್ ಪ್ರೊಡಕ್ಷನ್ ನಲ್ಲಿ ಮೂಡಿ ಬರುತ್ತಿದೆ ಬಹು ನಿರೀಕ್ಷೆಯ ಚೊಚ್ಚಲ ಸಿನೆಮಾ ‘ಮಾಡರ್ನ್ ಮಹಾಭಾರತ’. ಕಲಾತ್ಮಕ ಹಾಗೂ ಮನರಂಜನಾ ಕನ್ನಡ ಚಲನಚಿತ್ರ ಇಂದು (ಫೆ.26 ) ರಂದು ಉಡುಪಿ ಮತ್ತು ದ.ಕ. ಜಿಲ್ಲೆಗಳ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ಮೂರು ಸಂಸಾರಗಳ ವಿಷಯ ಹೊಂದಿರುವ ಈ ಸಿನೆಮಾದ ಕತೆಯೂ ಮಹಾಭಾರತದಂತೆ ಎಲ್ಲ ಆಯಾಮಗಳನ್ನೂ ಹೊಂದಿದೆ.
ಈ ಸಿನೆಮಾ ಬಿಡುಗಡೆಯ ಪೂರ್ವದಲ್ಲೇ 3 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎನ್ನುವುದು ಹೆಮ್ಮೆಯ ವಿಚಾರ. ಈ ಚಿತ್ರದಲ್ಲಿ ಕರುನಾಡ ಗೆಳೆಯರು ಎಂಬ ಸ್ಥಳೀಯರ ತಂಡದ ಕಲಾವಿದರು, ನೀನಾಸಂ ಗೆಳೆಯರು, ಕೆಲವು ಸ್ಯಾಂಡಲ್‍ವುಡ್ ಕಲಾವಿದರು ಪ್ರಮುಖ ಪಾತ್ರವಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನೀನಾಸಂ ಶಿವಶಂಕರ್ ಕಲಾ ನಿರ್ದೇಶಿಸಿದ್ದಾರೆ. ನವೀನ್ ಸೂರ್ಯ ಅವರ ಛಾಯಾಗ್ರಾಹಣ ಹಾಗೂ ಉಮೇಶ್ ಆರ್.ಬಿ. ಅವರ ಸಂಕಲನ ಚಿತ್ರಕ್ಕಿದೆ.
ಈ ಬಗ್ಗೆ ಚಿತ್ರದ ನಿರ್ದೇಶಕ ಕೋಟೇಶ್ವರದ ಶ್ರೀಧರ ಉಡುಪ ಮಾಹಿತಿ ನೀಡಿ, ಫೆ.26ರಂದು ಅಪರಾಹ್ನ 3:15ಕ್ಕೆ ಕೋಟೇಶ್ವರದ ಭಾರತ್ ಸಿನಿಮಾಸ್‍ನಲ್ಲಿ ಆಹ್ವಾನಿತರಿಗಾಗಿ ಪ್ರೀಮಿಯಂ ಶೋ ಏರ್ಪಡಿಸಲಾಗಿದ್ದು, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರು ಉದ್ಘಾಟಿಸುವರು. ಇದೇ ವೇಳೆ ರಾಷ್ಟ್ರಪತಿಗಳ ರಜತಕಮಲ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿಯವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.