ಉಡುಪಿ: “ಬೇಕ್ n ಕೇಕ್” ನೂತನ ಮಳಿಗೆ ಪ್ರಾರಂಭ
ಉಡುಪಿ: ನಗರದ ಹಳೆ ಅಂಚೆ ಕಛೇರಿ ರಸ್ತೆಯಲ್ಲಿ ನೂತನವಾಗಿ ಆರಂಭವಾದ “ಬೇಕ್ n ಕೇಕ್” ಬೇಕರಿ ಉತ್ಪನ್ನಗಳ ಮಾರಾಟ ಮಳಿಗೆ ಪ್ರಾರಂಭ.
ಮಿತ್ರ ಆಸ್ಪತ್ರೆಯ ಬಳಿಯ “ಬೇಕ್ n ಕೇಕ್” ಮಳಿಗೆಯನ್ನು ಕಟ್ಟಡದ ಮಾಲಕ ಕೇದರನಾಥ್ ಕಿಣಿ ಶುಕ್ರವಾರ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾಹಕರ ಇಚ್ಛೆಯಂತೆ ಸಿಹಿ ಸಿಹಿಯಾದ ವಿಶಿಷ್ಟ ವಿನ್ಯಾಸಗಳ ಬೇಕರಿ ಉತ್ಪನ್ನಗಳನ್ನು ಕ್ಲಪ್ತ ಸಮಯದಲ್ಲಿ ತಯಾರಿಸಿಕೊಡಲಾಗುವುದು ಎಂದು ಮಾಲಕ ಚೇತನ್ ಕುಮಾರ್ ತಿಳಿಸಿದ್ದಾರೆ. ಸಮಾರಂಭದಲ್ಲಿ ಮಾಲಕರ ಪತ್ನಿ ಶ್ವೇತ ಹಾಗೂ ನವೀನ್, ಶರತ್, ಅಭಿ, ಶಾಂತ ಉಪಸ್ಥಿತರಿದ್ದರು.