ಬಾರ್ಕೂರು: “ನಮ್ಮೂರು ನಮ್ಮ ಕೆರೆ” ಹೂಳೆತ್ತುವ ಕಾರ್ಯಕ್ರಮ
ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬ್ರಹ್ಮಾವರ ಇದರ ಆರ್ಥಿಕ ಸಹಕಾರದೊಂದಿಗೆ ಬಾರ್ಕೂರು ಗ್ರಾಮ ಪಂಚಾಯಿತಿ ಬೆಳ್ತಿಕೆರೆ ಅಭಿವೃದ್ಧಿ ಸಮಿತಿ ಇವರ ಸಹಭಾಗಿತ್ವದಲ್ಲಿ 233 ನೇ “ನಮ್ಮೂರು ನಮ್ಮ ಕೆರೆ” ಹೂಳೆತ್ತುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.
ಸಮಾರಂಭವನ್ನು ಬಾರ್ಕುರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಶಾಂತರಾಮ ಶೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳ್ತಿಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಜಿಲ್ಲಾ ನಿರ್ದೇಶಕ ಗಣೇಶ್ ಬಿ.ರವರು ಮಾತನಾಡಿ, ಮಾಹಿತಿ ಮಾರ್ಗದರ್ಶನ ನೀಡಿದರು. ಅಂತರ್ಜಲ ಮಟ್ಟ ವೃದ್ಧಿಸಿ ನೀರಿನ ಮೂಲಗಳನ್ನು ಬಲಪಡಿಸಬೇಕಿದೆ. ನೀರಿಲ್ಲದೆ ಬದುಕು ಎಂದಿಗೂ ಸಾಧ್ಯವಿಲ್ಲ, ಹಾಗಾಗಿ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು. ನೀರಿನ ಸಂರಕ್ಷಣೆಗಾಗಿ ನಮ್ಮೂರು ನಮ್ಮ ಕೆರೆ ಯೋಜನೆಯ ಮೂಲಕ ಕೆರೆಗಳನ್ನು ಹೂಳೆತ್ತಿಸಿ. ಹೆಚ್ಚು ನೀರು ಸಂಗ್ರಹವಾಗುವ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ 233 ಕೆರೆಗಳನ್ನು ಪುನಶ್ಚೇತನ ಮಾಡಲಾಗಿದ್ದು. ಗ್ರಾಮದಲ್ಲಿ ಅಂತರ್ಜಲ ಮಟ್ಟ ಕೂಡ ಹೆಚ್ಚಿದೆ ಹಾಗೂ ರೈತರ ಕೃಷಿ ಚಟುವಟಿಕೆ ಉತ್ತಮವಾಗಿ ಸಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಯು.ಕೆ.ವಾಸುದೇವ ಶೆಟ್ಟಿ, ಬ್ರಹ್ಮಾವರ ತಾಲೂಕಿನ ಮಾನ್ಯ ಯೋಜನಾಧಿಕಾರಿ ದಿನೇಶ್, ನಿವೃತ್ತ ಮುಖ್ಯೋಪಾಧ್ಯಾಯ ಬಿ. ಸುಧಾಕರ್ ರಾವ್, ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕ ಮಹಾಬಲೇಶ್ವರ ಭಟ್, ಕೂಸ ಕುಂದರ್, ವಲಯಾಧ್ಯಕ್ಷರಾದ ಗೌರಿ ಪೂಜಾರ್ತಿ, ಭುಜಂಗ ಶೆಟ್ಟಿ, ಭಾಸ್ಕರ ಆಚಾರ್ಯರವರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ತಾಲೂಕಿನ ಕೃಷಿ ಮೇಲ್ವಿಚಾರಕ ರಾಜೇಂದ್ರ ಜಿ., ಲೆಕ್ಕಪರಿಶೋಧಕ ಮಂಜುನಾಥ್, ವಲಯ ಮೇಲ್ವಿಚಾರಕಿ ಶಾಂತ, ಸೇವಾಪ್ರತಿನಿಧಿಯವರಾದ ಪೂರ್ಣಿಮಾ ಹೊಸಾಳ, ಒಕ್ಕೂಟದ ಸರ್ವ ಸದಸ್ಯರು. ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.