ಉದ್ಯಾವರ: ಕೈಗಾರಿಕಾ ವಲಯಕ್ಕೆ ಅನುಮತಿ – ನಾಗರಿಕರ ಬ್ಯಾನರ್ ವಾರ್!

ಉದ್ಯಾವರ: ಗ್ರಾಮ ಪಂಚಾಯತ್ ನಲ್ಲಿ ಮೀನಿನ ಶೀಥಲೀಕರಣ ಘಟಕ ಸ್ಥಾಪನೆಗೆ ಪರವಾನಿಗೆ ನೀಡಲಾಗುತ್ತದೆ ಎಂಬ ವಿಚಾರ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ವಿಚಾರಕ್ಕೆ ಸಂಬಂದಿಸಿ ಗ್ರಾಮ ಪಂಚಾಯತ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ  ಬೆನ್ನಲ್ಲೆ ಗ್ರಾಮ ಪಂಚಾಯತ್‍ನಲ್ಲಿ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಇದಾದ ಬೆನ್ನಲ್ಲೇ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫಿಶ್ ಫ್ರೀಜಿಂಗ್ ಘಟಕ ನಿರ್ಮಾಣಕ್ಕೆ ಕಾನೂನು ಬದ್ದವಾಗಿ ಪರವಾನಿ ಪಡೆದಿದ್ದೇವೆ. ಈ ಬಗ್ಗೆ ಅನಾವಶ್ಯಕವಾಗಿ ಅಪಪ್ರಚಾರ ಮಾಡಲಾಗುತ್ತದೆ ಅವರನ್ನು ಗ್ರಾಮಸ್ಥರು ನಂಬಬಾರದು ಹಾಗೂ ಅಪಪ್ರಚಾರ ಮಾಡುವವರನ್ನು ದೇವರ ನೋಡಿಕೊಳ್ಳುತ್ತಾರೆ ಎಂಬ ಬರಹಗಳನ್ನೊಳಗೊಂಡ ಬ್ಯಾನರ್‍ವೊಂದನ್ನು ಅಳವಡಿಸಲಾಗಿತ್ತು. ಇದೀಗ ಮತ್ತೊಂದೆಡೆ ಇದಕ್ಕೆ ವಿರುದ್ದವಾಗಿ ಮತ್ತೊಂದು ಬ್ಯಾನರ್ ನ್ನು ಪಿತ್ರೋಡಿ ಉದ್ಯಾವರದ ಸಾರ್ವಜನಿಕರು ಅಳವಡಿಸಿದ್ದಾರೆ.

ಈ ಬ್ಯಾನರ್‍ನಲ್ಲಿ ಗ್ರಾಮಸ್ಥರ ವಿರೋಧವಿದ್ದರೂ ಹಣದ ಆಮಿಷವೊಡ್ಡಿ ಫಿಶ್ ಘಟಕಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ಬ್ಯಾನರ್ ಅಳವಡಿಸಿದ್ದಾರೆ. ಪಿತ್ರೋಡಿ ಉದ್ಯಾವರ ಗ್ರಾಮದ ಸಾರ್ವಜನಿಕರು ಅಳವಡಿಸಿರು ಬ್ಯಾನರ್‍ನಲ್ಲಿ ” ಈಗಾಗಲೆ ಹೊಸದಾಗಿ ವಾಮಾ ಮಾರ್ಗದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಮತ್ತು ತಾಲೂಕು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ, ಕೆಲವು ಪುಂಡ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ, ನಾಲಾಯಕ್ 12ನೇ ವಾರ್ಡ್ ಸದಸ್ಯರುಗಳಿಗೆ ಮತ್ತು ಕೆಲವು ಪುಂಡ ಊರ ನಾಯಕರುಗಳಿಗೆ ಅಪಾರ ಪ್ರಮಾಣದ ಹಣದ ಆಮಿಷವೊಡ್ಡಿ ಮೀನು ಕಾರ್ಖಾನೆ ಲೈಸೆನ್ಸ್ ಪಡೆದಿರುತ್ತಾರೆ.

ಈ ಹಿಂದೆ ನೀವು ಮತ್ತು ಪಾಲುದಾರರು ಜನರ ವಿರೋಧ ಇದ್ದರೂ ಇದೇ ಜನಗಳಿಗೆ ಹಣದ ಆಮಿಷ ತೋರಿಸಿ ಕಾರ್ಖಾನೆಯನ್ನು ಸ್ಥಾಪಿಸಿದ್ದು, ಒಂದೆರಡು ವರ್ಷದಲ್ಲಿ ನಮ್ಮ ಊರ ದೇವರ ಶಾಪಕ್ಕೆ ಒಳಗಾಗಿ ಈಗಲೂ ನಮ್ಮ ಕಣ್ಣೆದುರೇ ಮಣ್ಣು ಪಾಲಾಗಿದ್ದು, ನೀವುಗಳು ಕೂಡಾ ಅನೇಕ ಕಾಯಿಲೆ ಗಳಿಂದ ಬಳಲುತ್ತಿರುವಿರಿ. ಅದಾಗ್ಯೂ ಈಗ ನೀವು ಹೊಸ ರೂಪದಲ್ಲಿ  ದೈವ ದೇವರುಗಳ ನ್ನು ಲೆಕ್ಕಿಸದೆ ಅದೇ ಜನರಿಗೆ ಹಣದ ಆಮಿಷವೊಡ್ಡಿ ಹೊಸ ಲೈಸೆನ್ಸ್ ನ್ನು ಪಡೆದು ಊರನ್ನು ಹಾಳುಗೆಡಲು ತಯಾರಿ ನಡೆಸುತ್ತಿರುವಿರಿ.

ಅಲ್ಲದೆ ಊರ ಜನರಿಗೆ ಧರ್ಮಸ್ಥಳ ದೇವರ ಮತ್ತು ಕೊರಗಜ್ಜ, ಕೋಟೆ ಬಬ್ಬುಸ್ವಾಮಿ, ಸ್ಥಳದ ನಾಗ ದೇವರು ಮತ್ತು ಗ್ರಾಮ ದೇವರು ಶ್ರೀ ಸಿದ್ದಿವಿನಾಯಕ ಮತ್ತು ಇತರ ದೇವರ ಹೆದರಿಕೆ ಹುಟ್ಟಿಸುವಂತೆ  ಬ್ಯಾನರ್ ಗಳನ್ನು ಹಾಕಿಸಿ ಕಾರ್ಖಾನೆಗಿರುವ ವಿರೋಧವನ್ನು ಧಮನಿಸಿರುವಿರಿ. ನೀವು ಯಾವ ದೇವರುಗಳನ್ನು ತೋರಿಸಿ ಹೆದರಿಸುವಿರಾ ಅದೇ ದೇವರುಗಳು ನಿಮ್ಮ ಮತ್ತು ನಿಮ್ಮಿಂದ ಹಣ ಪಡೆದು ಕೊಂಡ ಗ್ರಾಮ ಪಂಚಾಯತ್ ಸದಸ್ಯರುಗಳು, ಅಧಿಕಾರಿಗಳು, ಊರ ಪ್ರಮುಖ ನಾಯಕರು ಅವರ ಪಾಪ ಕರ್ಮಕ್ಕೆ ತಕ್ಕುದಾದ ಶಿಕ್ಷೆಯನ್ನು ದೇವರ ನೀಡಲಿ. ಊರಿನ ಸರ್ವ ಸಾರ್ವಜನಿಕರು ಪಿತ್ರೋಡಿ ಉದ್ಯಾವರ ಎಂದು ಬರೆದು ಬ್ಯಾನರ್ ಒಂದನ್ನು ಅಳವಡಿಸಲಾಗಿದೆ. ಸದ್ಯ ಈ ವಿಚಾರ ದಿನಕ್ಕೊಂದು ಬೆಳವಣಿಗೆ ಪಡೆಯುತ್ತಿದ್ದು, ಇದು ಉದ್ಯಾವರ ಗ್ರಾಮ ಪಂಚಾಯತ್ ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಸುದ್ದಿಮಾಡುತ್ತಿದೆ. 

Leave a Reply

Your email address will not be published. Required fields are marked *

error: Content is protected !!