ಉದ್ಯಾವರ: ಫಿಶ್ ಮೀಲ್ ಆರಂಭ ವದಂತಿ ಹಬ್ಬಿಸುವವರ ವಿರುದ್ಧ ದೇವರ ಮೊರೆ ಹೋದ ಮಾಲಕ

ಉಡುಪಿ: ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ಕೈಗಾರಿಕಾ ಉದ್ಯಮಕ್ಕೆ ಪರವಾನಿಗೆ ನೀಡಲಾಗಿದೆ ಎಂಬ ವಿಚಾರವಾಗಿ ಗ್ರಾಮ ಪಂಚಾಯತ್ ನ್ನು ಬಂದ್ ಮಾಡಿ ನ್ಯಾಯಕ್ಕಾಗಿ ಆಗ್ರಹಿಸಲಾಗಿತ್ತು.

ಇದೀಗ ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಬ್ಯಾನರ್ ಒಂದನ್ನು ಉದ್ಯಾವರದಲ್ಲಿ ಅಳವಡಿಸಲಾಗಿದ್ದು, ಈ ಮೂಲಕ ಗ್ರಾಮದಲ್ಲಿ ಫಿಶ್ ಮಿಲ್ ಮತ್ತು ಆಯಿಲ್ ಘಟಕ ಸ್ಥಾಪನೆ ಕುರಿತು ಇದ್ದಂತಹ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಲಾಗಿದೆ ಈ ಬ್ಯಾನರ್ ನಲ್ಲಿ , ಉದ್ಯಾವರ – ಪಿತ್ರೋಡಿಯ ಪ್ರಜ್ಞಾವಂತ ಜನರಲ್ಲಿ ನಾವು ಮನವಿ ಮಾಡಿಕೊಳ್ಳುತ್ತಿದ್ದು, ಈ ಮೂಲಕ  ನಾವು ನಮ್ಮ ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಫಿಶ್ ಮಿಲ್ ಮತ್ತು ಆಯಿಲ್ ಘಟಕ ಮಾಡುವುದಿಲ್ಲ. ನಿಮ್ಮ ಗಮನಕ್ಕೆ ತಿಳಿಸುವುದೇನೆಂದರೆ, ನಮಗೆ ಗ್ರಾಮ ಪಂಚಾಯತ್‌ನಿಂದ, ಹೈಕೋರ್ಟ್‌ನಿಂದ ಹಾಗೂ ಜಿಲ್ಲಾಧಿಕಾರಿಯವರು, ಮತ್ತು ತಹಶಿಲ್ದಾರರು ನೀಡಿರುವ ಜಾಗದ ಭೂ ಪರಿವರ್ತನ ಆದೇಶ ಮತ್ತು ನಗರಪ್ರಾಧಿಕಾರದ ಭೂವಲಯ ಬದಲಾವಣೆಯ ಆದೇಶ ಪ್ರತಿಯಲ್ಲೂ ಫಿಶ್ ಮಿಲ್ ಮತ್ತು ಆಯಿಲ್ ಘಟಕ ಮಾಡಲು ಅವಕಾಶ ನಿರಾಕರಿಸಿ ಕೇವಲ ಫಿಶ್ ಫ್ರೀಜಿಂಗ್ ಘಟಕ ( ಮೀನಿನ ಶೀತಲೀಕರಣ) ಮಾಡಲು ಅನುಮತಿ ನೀಡಿದ್ದಾರೆ.

ಆ ಪ್ರಕಾರವಾಗಿ ಎಲ್ಲಾ ಕಾನೂನುಬದ್ಧ ಸೂಕ್ತ ದಾಖಲೆಗಳನ್ನು ಉದ್ಯಾವರ ಗ್ರಾಮ ಪಂಚಾಯತ್‌ಗೆ ನೀಡಿ ಕಟ್ಟಡಕ್ಕೆ ಅನುಮತಿಯನ್ನು ಪಡೆದು ಕೊಂಡಿದ್ದೇವೆ. ಆದರೆ ಪಂಚಾಯತ್‌ನ ಕೆಲವು ಸದಸ್ಯರು ಹಾಗೂ ಕೆಲವು ಸ್ಥಾಪಿತ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ಊರಿನ ಜನರಿಗೆ ಅನಾವಶ್ಯಕವಾಗಿ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಅಲ್ಲದೇ ಈಗಾಗಲೇ ನಾವು ಎರಡು ಬಾರಿ ಫಿಶ್ ಮೀಲ್ ಘಟಕ ಮಾಡುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಊರಿನ ಜನರಿಗೆ ಮಾಹಿತಿ ನೀಡಿದ್ದೇವೆ.

ಕೊನೆಯದಾಗಿ ನಮ್ಮ ಊರಿನ ಜನರಿಗೆ ತಿಳಿಸುವುದೇನೆಂದರೆ ನಾವು ನಮ್ಮ ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಫಿಶ್ ಮಿಲ್ ಮತ್ತು ಆಯಿಲ್ ಘಟಕ ಮಾಡುವುದಿಲ್ಲವೆಂದು ಧೃಡಪಡಿಸುತ್ತೇವೆ. ಕಾನೂನು ರೀತಿ ಪಡೆದುಕೊಂಡ ಆದೇಶದಂತೆ ನಾವು ನಮ್ಮ ಜಾಗದಲ್ಲಿ ಫಿಶ್ ಫ್ರೀಜಿಂಗ್ ಘಟಕ (ಮೀನಿನ ಶೀತಲೀಕರಣ ಘಟಕ) ಮಾಡುತ್ತೇವೆಂದು ತಿಳಿಯಪಡಿಸುತ್ತೇವೆ. ಇಷ್ಟಾದರೂ ಕೂಡಾ ಇನ್ನು ನಾವು ಫಿಶ್‌ಮಿಲ್ ಮತ್ತು ಆಯಿಲ್ ಘಟಕ ಮಾಡುತ್ತೇವೆ ಎಂದು ಅಪಪ್ರಚಾರ ಮಾಡಿದಲ್ಲಿ ಅವರನ್ನು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ, ಉದ್ಯಾವರ ಶ್ರೀ ಸಿದ್ಧಿ ವಿನಾಯಕ , ಕೋಟೆ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳು ಮತ್ತು ಸ್ವಾಮಿ ಕೊರಗಜ್ಜ ಹಾಗೂ ಸ್ಥಳದ ನಾಗದೇವರೇ ನೋಡಿಕೊಳ್ಳಲಿ ಎಂದು ಬರೆದು ಬ್ಯಾನರ್ ಹಾಕಲಾಗಿದೆ.

Leave a Reply

Your email address will not be published. Required fields are marked *

error: Content is protected !!