ಬ್ರಹ್ಮಾವರ: ಡಿಸೆಂಟ್ ಫ್ರೆಂಡ್ಸ್ ಮಡಿಲಿಗೆ ‘ಸ್ವರ್ಣ ಸ್ಮೃತಿ ಟ್ರೋಫಿ’

ಉಡುಪಿ: ಸ್ವರ್ಣಸ್ಮೃತಿ, ಮಟಪಾಡಿ ಬ್ರಹ್ಮಾವರ ಇವರ ಆಶ್ರಯದಲ್ಲಿ ‘ಸ್ವರ್ಣಸ್ಮೃತಿ ಟ್ರೋಫಿ 2021’ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟಕೂಟ ಮಟಪಾಡಿ ಕ್ರೀಡಾಂಗಣದಲ್ಲಿ ನಡೆಯಿತು. 

ಈ ಪಂದ್ಯಾಕೂಟದಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ಫೈನಲ್ ಪಂದ್ಯದಲ್ಲಿ ಡಿಸೆಂಟ್ ಫ್ರೆಂಡ್ಸ್ ಪ್ರಥಮ ಸ್ಥಾನ ಪಡೆದರೆ ಫ್ರೆಂಡ್ಸ್ ಮಟಪಾಡಿ ದ್ವಿತೀಯ ಸ್ಥಾನ ಪಡೆಯಿತು. ಈ ಪಂದ್ಯಾಟದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಡಿಸೆಂಟ್ ನ ಶ್ರೀಕಾಂತ್ , ಉತ್ತಮ ದಾಂಡಿಗ ಪ್ರಶಸ್ತಿಯನ್ನು ಫ್ರೆಂಡ್ಸ್ ಮಟಪಾಡಿಯ ರಾಘವೇಂದ್ರ ಹಾಗೂ ಉತ್ತಮ ಬೌಲರ್ ಪ್ರಶಸ್ತಿಯನ್ನು ಧೀರಾಜ್ ಪಡೆದರು. 

ಕಾರ್ಯಕ್ರಮದಲ್ಲಿ ಹಂದಾಡಿ ಗ್ರಾ.ಪ. ಸದಸ್ಯ ಅಶೋಕ್ ಪೂಜಾರಿ, ಸ್ವರ್ಣಸ್ಮೃತಿ ಇದರ ಗೌರವಾಧ್ಯಕ್ಷ ಕೆ.ಪಿ.ಇಬ್ರಾಹಿಂ, ಅಧ್ಯಕ್ಷ ಸಂತೋಷ್ ಲುವಿಸ್, ಉದ್ಯಮಿ ಸುರೇಶ್ ಕರ್ಕೇರಾ, ಸುಜಯ್ ನಾಯಕ್ ಸ್ಯಾಮ್ಸನ್ ಸಿಕ್ವೇರ ಮತ್ತು ಸ್ವರ್ಣಸ್ಮತಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!