ಪೂರ್ಣಪ್ರಜ್ಞ ಕಾಲೇಜಿನ ಸ್ಕೌಟ್ಸ್ ವಿದ್ಯಾರ್ಥಿಗಳಿಂದ ಅನಾಥಾಶ್ರಮ ಭೇಟಿ: ಹಣ್ಣು ಹಂಪಲು ವಿತರಣೆ

ಉಡುಪಿ: ವಿಶ್ವ ಚಿಂತನಾ, ವಿಶ್ವ ಭಾತೃತ್ವ ಹಾಗೂ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ರೇಂಜರ್ ಮತ್ತು ರೋವರ್ ಘಟಕದ 60 ವಿದ್ಯಾರ್ಥಿಗಳು ಬ್ರಹ್ಮಾವರದ ‘ಅಪ್ಪ ಅಮ್ಮ’ ಅನಾಥಾಲಯಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಹಾಗೆ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಹಣ್ಣು ಹಂಪಲು ಹಾಗೂ ದಿನಸಿ ವಸ್ತುಗಳನ್ನು ಆಶ್ರಮಕ್ಕೆ ದೇಣಿಗೆಯಾಗಿ ನೀಡಿದರು. ಈ ದೇಣಿಗೆಗೆ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳು ಜತೆಗೆ ಕಾಲೇಜಿನ ಇತರ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕೈಜೋಡಿಸಿದರು. ಈ ಸಂದರ್ಭದಲ್ಲಿ ಶಾಂತಿ ಜಾಥವನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ರೇಂಜರ್ ನಾಯಕಿ ಜ್ಯೋತಿ ಆಚಾರ್ಯ ಸಂಯೋಜಿಸಿದರು. ರೋವರ್ ಸ್ಕೌಟ್ಸ್ ಲೀಡರ್ ಸಂತೋಷ್ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!