ಕೊಡವೂರು ದೊಂದಿ ಬೆಳಕಿನ ರಾಶಿಪೂಜಾ ಮಹೋತ್ಸವ: ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

ಉಡುಪಿ: ರಾಶಿ ಪೂಜಾ ಮಹೋತ್ಸವ ಸೇವಾ ಸಮಿತಿ ಶ್ರೀ ಶಂಕರ ನಾರಾಯಣ ದೇವಸ್ಥಾನ ಕೊಡವೂರು ಹಾಗೂ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಷಿಯೇಷನ್ ಉಡುಪಿ ವಲಯ ಆಯೋಜಿಸಿದ್ದ “ದೊಂದಿ ಬೆಳಕಿನ ರಾಶಿಪೂಜಾ ಮಹೋತ್ಸವಕ್ಕೆ ಛಾಯಾಚಿತ್ರ ಸಾಂಗತ್ಯ” ಎಂಬ ಛಾಯಾಗ್ರಹಣ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಫೆ.22 ರಂದು ನಡೆಯಿತು.

 ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಗೌರವಿಸಿ ಬಳಿಕ ಮಾತನಾಡಿದ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊಡವೂರು ಪ್ರಕಾಶ್ ಜಿ. ಅವರು, ರಾಶಿಪೂಜಾ ಮಹೋತ್ಸವದ ಸಂಭ್ರಮವನ್ನು ತಮ್ಮ ಕ್ಯಾಮೆರಾ ಕಣ್ಣುಗಳ ಮೂಲಕ ದಾಖಲೀಕರಿಸಿ,  ಮಹೋತ್ಸವದ ಸೌಂದಯವನ್ನು ಇಮ್ಮಡಿಗೊಳಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ, ಇನ್ನೋರ್ವ ಅತಿಥಿ ಜೇಸಿಐ ಸ್ವರ್ಣ ಉಡುಪಿಯ ಅಧ್ಯಕ್ಷ ಸುದೀಪ್ ಶೆಟ್ಟಿ ಮಾತನಾಡಿ, ದೊಂದಿ ಬೆಳಕಿನ ರಾಶಿಪೂಜಾ ಮಹೋತ್ಸವದ ಛಾಯಾಗ್ರಹಣವು ಅತ್ಯಂತ ಕಲಾತ್ಮಕವಾಗಿ ಮೂಡಿ ಬಂದಿದ್ದು, ನಿಜವಾಗಿಯೂ ಛಾಯಾಗ್ರಾಹಕರು ಅಭಿನಂದನಾರ್ಹರು ಎಂದರು.

ಸಮಾರಂಭದಲ್ಲಿ ಸ್ಪರ್ಧೆಯ ತೀರ್ಪುಗಾರರಾಗಿ ಆಸ್ಟ್ರೋ ಮೋಹನ್ ಭಾಗವಹಿಸಿದ್ದು, ಸ್ಪರ್ಧೆಯ ವಿಜೇತರಾದ ಪ್ರದೀಪ್ ಉಪ್ಪುರು, ಪ್ರಶಾಂತ್ ಕೆಮ್ಮಣ್ಣು, ಶ್ರೀಕಾಂತ್ ಉಡುಪ, ದಾಮೋದರ್ ಸುವರ್ಣ ಹಾಗು ಸಚಿನ್ ಪೂಜಾರಿರವರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ನಪ್ರಸ್ತುತ ಬಾದಾಮಿ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಬಿ.ಎಮ್ ಬೋವಿಯವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ವಲಯ ಗೌರವಾಧ್ಯಕ್ಷ ಶಿವ ಕೆ. ಅಮೀನ್,  ರಾಶಿಪೂಜಾ ಸೇವಾ ಸಮಿತಿಯ ಕಾರ್ಯದರ್ಶಿ ಜನಾರ್ದನ್ ಕೊಡವೂರು,ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ , ರಾಘವೇಂದ್ರ ಸೇರಿಗಾರ್, ಕಾರ್ಯದರ್ಶಿ ಸುಕೇಶ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!