ಕೋಳಿ ಅಂಕಕ್ಕೆ ಪೊಲೀಸ್ ದಾಳಿ: 22 ಕೋಳಿ, 30 ಜನ ಅಂದರ್
ಯಾದಗಿರಿ: ಕೋಳಿ ಅಂಕದ ಮೂಲಕ ಜೂಜಾಟ ನಡೆಯುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು, 22 ಹುಂಜಗಳೊಂದಿಗೆ 30 ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲೆಯ ಸುರಪುರ ಉಪವಿಭಾಗದ ಹಲವು ಕಡೆ ಮತ್ತು ಹುಣಸಗಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಕೋಳಿ ಅಂಕದಲ್ಲಿ ಜೂಜು ನಡೆಯುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳ ಕಚೇರಿಗೆ ಸಾಕಷ್ಟು ದೂರುಗಳು ಬಂದಿತ್ತು.
ಇಂದು ಹುಣಸಗಿ ತಾಲೂಕಿನ ರಾಯಗೇರಾ ಗ್ರಾಮದ ಹೊರ ವಲಯದಲ್ಲಿ ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು, ಅಡ್ಡೆ ಮೇಲೆ ದಾಳಿ ಮಾಡಿ 22 ಹುಂಜಗಳು 32 ಸಾವಿರ ನಗದು, 30 ಬೈಕ್ ಮತ್ತು 30 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.