ಕಾಡುಕೋಣ ಬೇಟೆ: ವಾಹನ ಬಿಟ್ಟು ಚಾಲಕ ಪರಾರಿ
ಭಟ್ಕಳ: ಕಾಡು ಪ್ರಾಣಿಯನ್ನು ಕೊಂದು ಸಾಗಿಸುತ್ತಿದ್ದ ವಾಹನವನ್ನು ತಡೆದು ಹತ್ಯೆಗೀಡಾಗಿದ್ದ ವನ್ಯಜೀವಿಯನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಭಟ್ಕಳದಲ್ಲಿ ನಡೆದಿದೆ.
ಹೊನ್ನಾವರದಿಂದ ಭಟ್ಕಳಕ್ಕೆ ಅತಿ ವೇಗವಾಗಿ ಚಲಿಸುತ್ತಿದ್ದ ವಾಹನವನ್ನು ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆಗಾಗಿ ತಡೆದಿದ್ದಾರೆ. ಆದರೆ ವಾಹನ ನಿಲ್ಲಿಸದೇ ಚಾಲಕರು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಅನುಮಾನ ಗೊಂಡ ಅಧಿಕಾರಿಗಳು ವಾಹನವನ್ನು ಬೆನ್ನಟ್ಟಿ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ವನ್ಯಜೀವಿ (ಕಾಡುಕೋಣ) ಯನ್ನು ಹತ್ಯೆಮಾಡಿ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಶಿರಾಳಿ ಬಳಿ ಬ್ಯಾರಿಕೇಡ್ ಗಳಿಗೆ ಡಿಕ್ಕಿ ಹೊಡೆದಿದ್ದ ಈ ವಾಹನ ಭಟ್ಕಳಕ್ಕೆ ತಲುಪುವುದಕ್ಕಾಗಿ ತೆಂಗಿನಗುಂಡಿ ಗ್ರಾಮದ ಮೂಲಕ ಒಳ ರಸ್ತೆಯಲ್ಲಿ ಹಾದು ಹೋಗಲು ಯತ್ನಿಸಿತು. ಆದರೆ ಮದೀನಾ ರಸ್ತೆಯಲ್ಲಿ ಅದನ್ನು ಅಲ್ಲಿಯೇ ಬಿಟ್ಟು ವಾಹನ ಚಾಲಕ ಪರಾರಿಯಾಗಿದ್ದಾನೆ. ಈ ವೇಳೆ ಅಧಿಕಾರಿಗಳು ಅರ್ಧ ಹತ್ಯೆ ಮಾಡಲಾಗಿದ್ದ ವನ್ಯ ಜೀವಿ ವಾಹನದಿಂದ ಟಿಶರ್ಟ್, ಕ್ಯಾಮರ, ನೀರಿನ ಬಾಟಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.