ಪೊಲೀಸ್ ಠಾಣೆಯಲ್ಲೇ ಪಾನಗೋಷ್ಠಿ,ಜೂಜು: ನಾಲ್ವರ ಅಮಾನತು

ತುಮಕೂರು: ಪೊಲೀಸ್ ಠಾಣೆಯಲ್ಲೇ ಮದ್ಯಪಾನ ಮಾಡಿ ಜೂಜಾಡಿದ ಹೆಬ್ಬೂರು ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಗೂ ಮೂವರು ಪೇದೆಗಳನ್ನು ಅಮಾನುತು ಮಾಡಲಾಗಿದೆ.

ಕರ್ತವ್ಯ ನಿರತರಾಗಿದ್ದಾಗ ಕಾನೂನು ಸುವ್ಯವಸ್ಥೆಯ ಕಡೆ ಗಮನಕೊಡದೇ ಠಾಣೆಯಲ್ಲಿ ಮದ್ಯಪಾನ ಮಾಡಿ ಮೋಜು ಮಾಡಿದ ಮತ್ತು ಜೂಜಾಟ ಆಡಿ ಗಲಾಟೆ ಮಾಡಿಕೊಂಡ ಆರೋಪದ ಮೇಲೆ ಎಸ್ ಪಿ ವಂಶಿಕೃಷ್ಣ ಅವರು ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಎಎಸ್ಐ ರಾಮಚಂದ್ರಯ್ಯ, ಪೇದೆಗಳಾದ ಮಹೇಶ್, ಚೆಲುವರಾಜು, ಸಂತೋಷ್ ಅಮಾನತುಗೊಂಡವರು.

ಹೆಬ್ಬೂರು ಠಾಣೆಯ ಮೇಲಿರುವ ಕೊಠಡಿಯಲ್ಲಿ ಮದ್ಯಪಾನ ಮಾಡಿ ಜೂಜಾಡಿ ಪರಸ್ಪರ ಹೊಡೆದಾಡಿಕೊಂಡಿರುವ ಬಗ್ಗೆ ಸಬ್ ಇನ್ ಸ್ಪೆಕ್ಟರ್ ಅವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.

1 thought on “ಪೊಲೀಸ್ ಠಾಣೆಯಲ್ಲೇ ಪಾನಗೋಷ್ಠಿ,ಜೂಜು: ನಾಲ್ವರ ಅಮಾನತು

  1. Strict action should be taken against the staff of Hebburu Police station, Thumakuru Dist, who were made the alcohol drinking party and other illegal activities inside the premises. Good luck to Vamshi Krishna, SP.

Leave a Reply

Your email address will not be published. Required fields are marked *

error: Content is protected !!