ನೇಣು ಬಿಗಿದು ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಳ್ತಂಗಡಿ: ನೇಣು ಬಿಗಿದು ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರಿನಲ್ಲಿ ನಡೆದಿದೆ. ಕತ್ತೋಡಿಬೈಲು ನಿವಾಸಿ ಸೌಮ್ಯಾ (19) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ.
ಈಕೆ ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿನಿಯಾಗಿದ್ದಾರೆ. ಲಾಕ್‍ಡೌನ್ ಬಳಿಕ ಕಾಲೇಜು ತೆರೆದುಕೊಂಡರೂ ಈಕೆ ಕಾಲೇಜಿಗೆ ಹೋಗದೇ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಎಂದಿನಂತೆ ಬೆಳಿಗ್ಗೆ ಮನೆಯಲ್ಲಿ ಉಪಹಾರ ಮುಗಿಸಿದ ಬಳಿಕ ಕೆಲಕಾಲ ಅವರು ಕಾಣೆಯಾಗಿದ್ದರು. ಬಳಿಕ ಮನೆ ಮಂದಿ ಹುಡುಕಾಡಿದಾಗ ಮನೆಯಲ್ಲೇ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.