ಅಮೂಲ್ಯ ದಾಖಲೆ ಪತ್ರ ಕಳೆದು ಹೋಯಿತಾ… ಠಾಣೆಗೆ ಹೋಗಬೇಕಾಗಿಲ್ಲ – ಆಪ್ ಮೂಲಕ ದೂರು ನೀಡಿ
ಉಡುಪಿ: ಸಾರ್ವಜನಿಕರು ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೊದಲಾದ ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡಲ್ಲಿ ಪೊಲೀಸರಿಗೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಬೇಕಿಲ್ಲ. ಇದಕ್ಕಾಗಿ ಸಾರ್ವಜನಿಕ ಅನುಕೂಲಕ್ಕಾಗಿ ಪೊಲೀಸ್ ಇಲಾಖೆ ಇ-ಲಾಸ್ಟ್ ರಿಪೋರ್ಟ್ ಆಪ್ ನ್ನು ಪರಿಚಯಿಸುತ್ತಿದೆ.
ಈ ಆಪ್ ಮೂಲಕ ಸಾರ್ವಜನಿಕ ರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಚೆಕ್, ಡಿಡಿ, ಗುರುತಿನ ಚೀಟಿ, ಟ್ಯಾಬ್ಲೆಟ್, ಐಪ್ಯಾಡ್, ಲ್ಯಾಪ್ಟಾಪ್, ಮೊಬೈಲ್, ಪಾನ್ ಕಾರ್ಡ್, ಪಾಸ್ ಬುಕ್, ಪಾಸ್ ಪೋರ್ಟ್, ರೇಶನ್ ಕಾರ್ಡ್, ವಿಡಿಯೋ ಕ್ಯಾಮರಾ, ಶೈಕ್ಷಣಿಕ ಪ್ರಮಾಣ ಪತ್ರಗಳು, ಓಟರ್ ಐಡಿ ಗಳನ್ನು ಕಳೆದುಕೊಂಡಲ್ಲಿ ದೂರು ನೀಡಬಹುದಾಗಿದೆ.
ಕರ್ನಾಟಕ ಸ್ಟೇಟ್ ಪೊಲೀಸ್ ಆಪ್ ಗೆ ಲಾಗಿನ್ ಆಗುವ ಮೂಲಕ ಇ- ಲಾಸ್ಟ್ ರಿಪೋರ್ಟ್ ಆಪ್ ನಲ್ಲಿ ಸಾರ್ವಜನಿಕ ರು ತಾವು ಕಳೆದುಕೊಂಡ ದಾಖಲೆ ಗಳ ಕುರಿತಾಗಿ ಮಾಹಿತಿ ಭರ್ತಿ ಮಾಡಿ ದೂರು ದಾಖಲಿಸಬಹುದು. ಇದರೊಂದಿಗೆ ತಕ್ಷಣ ತಾವು ದಾಖಲಿಸಿದ ದೂರುಗಳ ಕುರಿತ ಸ್ವೀಕೃತಿ ಯನ್ನೂ ಪಡೆಯಬಹುದಾಗಿದೆ. ಈ ಆಪ್ ಸಾರ್ವಜನಿಕರಿಗೆ ಅನುಕೂಲಕರವಾಗಲಿದ್ದು ತಾವು ವಸ್ತುಗಳನ್ನು ಕಳೆದುಕೊಂದ ತಕ್ಷಣದಲ್ಲೇ ದೂರು ದಾಖಲಿಸಬಹುದಾಗಿದೆ ಆದ್ದರಿಂದ ಸಾರ್ವಜನಿಕರು ಈ ಆಪ್ ನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಪೊಲೀಸ್ ಇಲಾಖೆ ಸಲಹೆ ನೀಡಿದೆ.