ಮಲ್ಪೆ: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಮಲ್ಪೆ: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ.
ವಿಶ್ವನಾಥ(48) ಮೃತಪಟ್ಟ ಮೀನುಗಾರ. ಫೆ.16 ರಂದು ಮಹಾಬಲೇಶ್ವರ ಹೆಸರಿನ ಮೀನುಗಾರಿಕಾ ಬೋಟ್ನಲ್ಲಿ ಇತರ ಮೀನುಗಾರರೊಂದಿಗೆ ವಿಶ್ವನಾಥ ಅವರು ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸುತ್ತಿದ್ದ ವೇಳೆ, ಫೆ.17 ರಂದು ಅಲೆಗಳ ಹೊಡೆತಕ್ಕೆ ಸಿಲುಕಿ ವಿಶ್ವನಾಥ ಅವರು ಬೋಟ್ನಿಂದ್ ಸಮುದ್ರಕ್ಕೆ ಬಿದ್ದಿದ್ದಾರೆ.
ಈ ವೇಳೆ ಬೋಟ್ನಲ್ಲಿದ್ದ ಇತರ ಮೀನುಗರರು ವಿಶ್ವನಾಥರನ್ನು ಹುಡುಕಾಡಿದರು ಅವರು ಪತ್ತೆಯಾಗಿರಲಿಲ್ಲ. ಬಳಿಕ ಫೆ.19 ರಂದು ಸಂಜೆ ವೇಳೆಗೆ ಅವರ ಮೃತದೇಹವು ನೀರಿಗೆ ಬಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.