IPL ಇತಿಹಾಸದಲ್ಲೇ ಗರಿಷ್ಠ ಬೆಲೆಗೆ ಮಾರಾಟವಾದ ದ.ಆಫ್ರಿಕಾ ತಂಡದ ಆಲ್ ರೌಂಡರ್ ಯಾರು ಗೊತ್ತೆ?
ಚೆನ್ನೈ: ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಬೆಲೆಗೆ ಮಾರಾಟವಾಗುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಆಲ್ ರೌಂಡರ್ ದಾಖಲೆ ನಿರ್ಮಿಸಿದ್ದಾರೆ.
ಚೆನ್ನೈನಲ್ಲಿ ನಡೆಯುತ್ತಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್ ಮೋರಿಸ್ ದಾಖಲೆಯ 16.25 ಕೋಟಿ ರೂಗಳಿಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಕೀರ್ತಿಗೆ ಕ್ರಿಸ್ ಮೋರಿಸ್ ಭಾಜನರಾಗಿದ್ದಾರೆ. ಈ ಹಿಂದೆ ಭಾರತ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ 16 ಕೋಟಿ ರೂಗಳಿಗೆ ಮಾರಾಟವಾಗಿದ್ದರು. ಇದು ಈ ವರೆಗಿನ ಗರಿಷ್ಠ ದಾಖಲೆಯಾಗಿತ್ತು.
ಆದರೆ ಇಂದು 75 ಲಕ್ಷ ರೂ ಮೂಲ ಬೆಲೆ ಹೊಂದಿದ್ದ ಕ್ರಿಸ್ ಮೋರಿಸ್ 16.25 ಕೋಟಿ ರೂಗಳಿಗೆ ಮಾರಾಟವಾಗುವ ಮೂಲಕ ಈ ದಾಖಲೆಯನ್ನು ಹಿಮ್ಮೆಟಿಸಿದ್ದಾರೆ.
ಬಲಗೈ ವೇಗದ ಬೌಲರ್ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿರುವ ಮೋರಿಸ್ ಈವರೆಗೆ 70 ಐಪಿಎಲ್ ಪಂದ್ಯಗಳನ್ನು ಆಡಿದ್ದು, 23.95ರ ಸರಾಸರಿಯಲ್ಲಿ 551 ರನ್ ಗಳಿಸಿದ್ದಾರೆ. ಅಂತೆಯೇ ಕ್ರಿಸ್ ಮೋರಿಸ್ ಅವರ 157.87 ಆಗಿದೆ. ಇತ್ತ ಬೌಲಿಂಗ್ ನಲ್ಲೂ ಅಪೂರ್ವ ದಾಖಲೆಹೊಂದಿರುವ ಮೋರಿಸ್ 80 ವಿಕೆಟ್ ಪಡೆದಿದ್ದಾರೆ